ಕೇಂದ್ರ ಗ್ರಂಥಾಲಯದಲ್ಲಿ...
ಗುಲ್ಬರ್ಗ: ಬಸವೇಶ್ವರ ಜಯಂತಿ ನಿಮಿತ್ತ ಶುಕ್ರವಾರ ಕೇಂದ್ರ ಗ್ರಂಥಾಲಯದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನ ಸಾಹಿತ್ಯ ಕುರಿತು ಪುಸ್ತಕಗಳ ಪ್ರದರ್ಶನ ಏರ್ಪಡಿಸಿದ್ದರು. ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಸಿದ್ದರಾಮ.ಕೆ ದೇವತ್ಕಲ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ದೀಪಕ ಎಂ.ಕಮತರ, ಶರಣು ಮಲಕೂಡ, ಪಿ.ಎಂ. ಕುಲ್ಕರ್ಣಿ, ಸುಭಾಶ್ಚಂದ್ರ ಸಿದ್ದರಾಮ, ಗುಣವಂತ ಶೀರುನಾಥ ರಾಠೋಡ ಉಪಸ್ಥಿತರಿದ್ದರು.