ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಾತಿ ವ್ಯವಸ್ಥೆ ಮಧ್ಯೆ ಬಸವ ಸ್ಮರಣೆ!

Rashmi Kasaragodu
Updated On : 3 May 2014, 11:59 am

ಗುಲ್ಬರ್ಗ: ಹನ್ನೆರಡನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಸವಣ್ಣನವರು ಸಮಾಜದಲ್ಲಿ ಬೆಳಗಿಸಿದ ಜ್ಯೋತಿಯ ಪ್ರಾಮುಖ್ಯತೆ ಇಂದಿಗೂ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್. ವಿ. ಪ್ರಸಾದ್ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ  ಬಸವಣ್ಣನವರ ಜಯಂತಿ ಅಂಗವಾಗಿ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಎಲ್ಲಕಡೆ ಸಮಾನತೆ ತರುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಬ್ಬರ ಉದ್ಧಾರಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ವಿಶ್ವದ ಮೊದಲ ಪಾರ್ಲಿಮೆಂಟ್: ಬಾಗಲಕೋಟೆ ಜಿಲ್ಲೆಯ ಶಿರೂರಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಎಲ್ಲ ಧರ್ಮಗಳ ಶರಣರನ್ನೊಳಗೊಂಡು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಪಾರ್ಲಿಮೆಂಟ್ ಕಲ್ಪನೆಯಾಗಿತ್ತು. ಅಂದಿನ ಕಾಲದಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನು ಹಾಗೂ ಪರಿಕಲ್ಪನೆಯನ್ನು ಬಸವಣ್ಣ ನೀಡಿದ್ದರು ಎಂದು ತಿಳಿಸಿದರು.
ಕ್ರಾಂತಿಕಾರಕ ವಿಚಾರಧಾರೆಗಳು:12ನೇ ಶತಮಾನದಲ್ಲಿ ಏಕಕಾಲಕ್ಕೆ ಸಮಾಜೋದ್ಧಾರಕ ಕ್ರಾಂತಿಯನ್ನು ಬಸವಣ್ಣವನರು ಕೈಗೊಂಡರು. ಅಂದಿನ ಬಸವಾದಿ ಶರಣರದ್ದು ಕ್ರಾಂತಿಕಾರಕ ವಿಚಾರಧಾರೆಗಳಾಗಿವೆ ಎಂದು ಹೇಳಿದರು.
ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ ಸಿಂಗ್, ಜಿಪಂ. ಸಿಇಒ ಟಿ.ಎಚ್.ಎಂ.ಕುಮಾರ, ಪಾಲಿಕೆ ಆಯುಕ್ತ ಶ್ರೀಕಾತ ಕಟ್ಟಿಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement