ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಲಿಂಗಾಯತ ಸ್ವತಂತ್ರವಾಗಲಿ'

Rashmi Kasaragodu
Updated On : 3 May 2014, 11:59 am

ಆಳಂದ: ಲಿಂಗಾಯತ ಸ್ವತಂತ್ರ ಧರ್ಮವನ್ನು ಸಂವಿಧಾನಿಕವಾಗಿ ಸರ್ಕಾರ ಮಾನ್ಯತೆ ನೀಡಬೇಕು. ಆಗ ಮಾತ್ರ ಸರ್ಕಾರ ಆಚರಿಸುತ್ತಿರುವ ಜಯಂತಿಗೆ ಅರ್ಥ ಬರುತ್ತದೆ ಎಂದು ಉಸ್ತುರಿ-ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.
ತಾಲೂಕಿನ ಖಜೂರಿ ಗ್ರಾಮದ ಬಸವೇಶ್ವರ ತರುಣ ಸಂಘದ ಆಶ್ರಯದಲ್ಲಿ ಬಸ್ ನಿಲ್ದಾಣ ಬಳಿ ಏರ್ಪಡಿಸಿದ್ದ ಬಸವ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮದ ಮಾನ್ಯತೆ ನೀಡದೆ ಲಿಂಗಾಯತರನ್ನು ಮೂಲೆ ಗುಂಪಾಗಿಸಿ ಸರ್ಕಾರಿ ಸೌಲಭ್ಯಗಳಿಂದ ವಂಚನೆ ಮಾಡಲಾಗುತ್ತಿದೆ. ಇದಕ್ಕಾಗಿ ಹೋರಾಟ ಮಾಡುವ ಮೂಲಕ ಶರಣ ಸಂಸ್ಕೃತಿ ಪರಂಪರೆ ಉಳಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಜೈಪಾಲ ಭದ್ರೆ, ಶರಣಪ್ಪ ಹೊಸಮನಿ, ಸಂಜಯ ಚೆಂಗಳೆ, ಗಾಂಧಿ ಘಂಟೆ, ಶ್ರೀಮಂತ ವಾನೆಗಾಂವ, ನಾಗೇಶ ನಗರೆ, ಸಂತೋಷ ವಾನೆಗಾಂವ, ಮಲ್ಲಿನಾಥ ವಾನೆಗಾಂವ, ಮಂಜುನಾಥ ಎಣೆಗೂರೆ, ಕಲ್ಲಪ್ಪ ಖುನೆ, ಶಿವಪ್ಪ ತುಪ್ಪದೊಡ್ಡಿ, ಕಲ್ಯಾಣಿ ಸಲ್ತಾನಪೂರೆ, ಶ್ರೀಶೈಲ ಬಂಗರಗಿ, ರಾಜು ಢಗೆ, ಸಿದ್ದರಾಮ ಘಂಟೆ, ರೇವಣಸಿದ್ದಪ್ಪ ಅಲ್ದಿ, ಶಿವಬಸಪ್ಪ ಶಿವಶೆಟ್ಟಿ ಅನೇಕರು ಪಾಲ್ಗೊಂಡಿದ್ದರು. ಪ್ರಮುಖ ರಸ್ತೆಗಳ ಮೂಲಕ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement