ಶಹಾಬಾದ್ ನಗರಸಭೆಯಲ್ಲಿ ನಮನ
ಶಹಾಬಾದ್:ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಗಿರೀಶ ಕಂಬಾನೂರ, ಪೌರಾಯುಕ್ತ ಕೆ.ಗುರುಲಿಂಗಪ್ಪರವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಅರುಣಕುಮಾರ ಪಟ್ಟಣಕರ, ಡಾ. ಅಹ್ಮದ ಪಟೇಲ, ನಗರದ ಗಣ್ಯರಾದ ಬಸವರಾಜ ತರನಳ್ಳಿ, ನಾಗಣ್ಣ ರಾಂಪೂರೆ ಸೇರಿದಂತೆ ನಗರ ಸಭೆ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಬಸವೇಶ್ವರ ವೃತ್ತ: ಬಸವೇಶ್ವರ ವೃತ್ತದಲ್ಲಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಇಎಸ್ಐ ಕಾಶೀನಾಥ, ಪೌರಾಯುಕ್ತ ಕೆ.ಗುರುಲಿಂಗಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ನಗರಸಭೆ ಸದಸ್ಯರಾದ ಅರುಣಕುಮಾರ ಪಟ್ಟಣಕರ, ಸೂರ್ಯಕಾಂತ ಕೋಬಾಳ, ಶಿವುಗೌಡ, ಪಪ್ಪು ವಳಸಂಗ, ವೈಜನಾಥ ಹುಗ್ಗಿ, ಗಿರಿಮಲ್ಲಪ್ಪ ವಳಸಂಗ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ವಾಡಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರ, ಸದಸ್ಯರು, ಸಿಬ್ಬಂದಿ ವರ್ಗ, ಮುಖಂಡರಾದ ನೀಲಯ್ಯ ಸ್ವಾಮಿ ಉಪಸ್ಥಿತರಿದ್ದರು.
ಹಲಕರ್ಟಿ: 12 ನೇ ಶತಮಾನದಲ್ಲಿ ಜಾತ್ಯಾತೀತವಾಗಿ ಎಲ್ಲರನ್ನು ಸನ್ಮಾರ್ಗದಲ್ಲಿ ಕೊಂಡೊಯ್ದು ಭೂಮಿಯನ್ನು ಸ್ವರ್ಗವನ್ನಾಗಿಸಿದ ಏಕೈಕ ವ್ಯಕ್ತಿ ಬಸವಣ್ಣನವರಾಗಿದ್ದು, ಅವರ ಆದರ್ಶಗಳನ್ನು ಪಾಲಿಸಿ ನಾವು ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಹಲಕರ್ಟಿ ಹೇಳಿದರು.
ಅವರು ಶುಕ್ರವಾರ ಬಸವ ಜಯಂತಿ ಅಂಗವಾಗಿ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಪಂ.ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಸವರಾಜ ಅವಂಟಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ ರಡ್ಡಿ, ಅಧ್ಯಕ್ಷ ದೇವೆಂದ್ರರಡ್ಡಿ ತೋಟದ, ಗ್ರಾಮಸ್ಥರಾದ ಮಲ್ಲಣ್ಣ ಸಾಹು ಸಂಗಶೆಟ್ಟಿ ಸೇರಿದಂತೆ ಇತರರು ಪಾಲ್ಗೊಂಡರು.