ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಲವೆಡೆ ಬಸವೇಶ್ವರರ ಜಯಂತಿ ಆಚರಣೆ

Rashmi Kasaragodu
Updated On : 3 May 2014, 12:00 pm

ಆಳಂದ: ಪಟ್ಟಣ ಸೇರಿದಂತೆ ತಾಲೂಕಿನ ಹಲವಡೆ ಶುಕ್ರವಾರ ಬಸವ ಜಯಂತಿ ಅದ್ಧೂರಿಯಾಗಿ ಆಚರಿಸಲಾಯಿತು.
ತಹಸೀಲ್ದಾರ್ ಕಚೇರಿ: ಬಸವ ಜಯಂತಿ ನಿಮಿತ್ತ ಬಸವೇಶ್ವರ ಭಾವಚಿತ್ರಕ್ಕೆ ಶಿರಸ್ತೆದಾರ ಶರಣಪ್ಪ ಪೂಜೆ ನೆರವೇರಿಸಿದರು. ನಾಡ ತಹಸೀಲ್ದಾರ್ ಚಂದ್ರಕಾಂತ ಉಳ್ಳೆ, ಶಿರಸ್ತೆದಾರ ಪ್ರಕಾಶ ಸಿಂದಗಿ, ಕಂದಾಯ ನಿರೀಕ್ಷಕ ಅಬ್ದುಲ್ ವಾಹಬ್, ಭೂ ಮಾಪನಾ ಅಧಿಕಾರಿ ಸೈಯದ್ ದಾವೂದ್, ವಿನಾಯಕ ಕುಲಕರ್ಣಿ, ವಿಐ ಲಕ್ಷ್ಮಣರಾವ್ ತೆಲಾಕುಣಿ ಹಾಜರಿದ್ದರು.
ತಾಪಂ ಇಒ ಲಕ್ಷ್ಮಣ ಶೃಂಗೇರಿ, ಜಿಪಂ ಎಇಇ ಅಬ್ದುಲ್ ಸಲಾಂ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ರಮೇಶ ಮರನೂರ್, ಡಾ. ಸಂಜಯ ರೆಡ್ಡಿ, ಪಿಆರ್‌ಪಿ ರಾಜ್ಯ ಅಧ್ಯಕ್ಷ ಪ್ರಕಾಶ ಮೂಲಭಾರತಿ, ನ್ಯಾಯವಾದಿ ಮಹಾದೇವ ಹತ್ತಿ, ಶ್ರೀಮಂತ ಕಾರಬಾರಿ, ದಯಾನಂದ ಶೇರಿಕಾರ, ಮಹಾಲಿಂಗಪ್ಪ ಜಮಾದಾರ ಅನೇಕರು ಪಾಲ್ಗೊಂಡಿದ್ದರು.
ಬಸ್ ನಿಲ್ದಾಣದಲ್ಲಿ: ಪಟ್ಟಣದ ಬಸ್ ನಿಲ್ದಾಣ ಮುಂದೆ ಪುರಸಭೆ ಮತ್ತು ತಾಲೂಕು ಆಡಳಿತ ಪರವಾಗಿ ಜಯಂತಿ ಆಚರಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಭೀಮಾಶಂಕರ ಜಮಗಿ, ಪುರಸಭೆ ಸದಸ್ಯ ರಾಮ ಹತ್ತರಕಿ, ದಲಿತ ಸೇನೆ ಅಧ್ಯಕ್ಷ ಮಲ್ಲಿಕಾಜುನ ಬೋಳಣಿ, ಶಿರಸ್ತೆದಾರ ಶರಣಪ್ಪಾ, ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಮತ್ತು ಹಲವು ನಾಗರಿಕ ಮುಖಂಡರು ಭಾಗವಹಿಸಿದ್ದರು.
ಖಾಜಿ ಗಲ್ಲಿ: ಪಟ್ಟಣದ ಖಾಜಿಗಲ್ಲಿಯಲ್ಲಿನ ಗಜಾನನ ತರುಣ ಸಂಘದ ಆಶ್ರಯದಲ್ಲಿ ಜಯಂತಿ ಆಚರಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಕೈಗೊಳ್ಳಲಾಯಿತು. ಮುಖಂಡ ಸಂಜು ಇಂಗಳೆ, ಮಲ್ಲಿಕಾರ್ಜುನ ಎಳಮೆಲಿ, ಶರಣಬಸಪ್ಪ ಘಸನೆ, ಶಿವಾ ಚಿಂಚೋಳೆ, ಅಶೋಕ ಮಸೂಂದೆ, ಶಿವುಪುತ್ರಪ್ಪ ಭೂಸಗೆ, ಖಂಡು ಉಮ್ರೆ, ಮಲ್ಲು ಉಂಬರಗಿ, ರಾಜು ಗೊಳೆದ ಮತ್ತು ಶೇಖರ ಬೋಸ್ಲೆ ಸೇರಿ ಅನೇಕ ಯುವಕರು ಭಾಗವಹಿಸಿದ್ದರು.
ಹನುಮಾನ ಬಡಾವಣೆಯ ಬಸವ ಸೇನೆ ಯುವಕರಿಂದ ನಾಮಫಲಕ ಮತ್ತು ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಲಾಯಿತು.
ಶರಣನಗರ, ತಾಲೂಕಿನ ಖಜೂರಿ ಸೇರಿ ಮತ್ತಿತರ ಕಡೆ ಬಸವ ಜಯಂತಿ ಆಚರಣೆ ಕೈಗೊಳ್ಳಲಾಯಿತು.
ಸಾಲೇಗಾಂವ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಪಲ್ಲಕ್ಕಿ ಮೆರವಣಿಗೆ ನಂತರ ರಥೋತ್ಸವ ರಾತ್ರಿ ಮನರಂಜನೆ ಕಾರ್ಯಕ್ರಮ ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement