ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎನ್ನೆಸ್ಸೆಸ್ ಶಿಬಿರದಿಂದ ನಾಯಕತ್ವ ಗುಣ ವೃದ್ಧಿ

Rashmi Kasaragodu
Updated On : 4 May 2014, 2:51 am

ಗುಲ್ಬರ್ಗ: 'ನೀ ಬಯಸುವ ಬದಲಾವಣೆ ನಿನ್ನಿಂದಲೇ ಶುರುವಾಗಲಿ' ಎಂಬಂತೆ ಎನ್ನೆಸ್ಸೆಸ್‌ನಿಂದ ಯುವಕರಲ್ಲಿ ನಾಯಕತ್ವದ ಗುಣ, ಸದೃಢ ಆರೋಗ್ಯ ಬೆಳೆಯಬೇಕಾದರೆ ಎನ್ನೆಸ್ಸೆಸ್ ಶಿಬಿರ ಅತ್ಯಂತ ಮಹತ್ವವಾದದ್ದು ಎಂದು ಜಂಟಿ ನಿರ್ದೇಶಕ ಡಾ. ಶಂಕರ ತಿಳಿಸಿದರು. ಸರ್ಕಾರಿ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎನ್ನೆಸ್ಸೆಸ್‌ನಿಂದ ರಾಷ್ಟ್ರಪ್ರೇಮ, ಭಾತೃತ್ವ, ಸಹಬಾಳ್ವೆ ಬೆಳೆದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮನಸ್ಸು ಹಾತೊರೆಯುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಮುಜದ್ದದಿ ಎಸ್.ಎ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ನೆಸ್ಸೆಸ್ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದ ಪ್ರತಿರೂಪವಾಗಿದೆ ಎಂದು ಹೇಳಿದರು. ಡಾ. ಅನೀಲಕುಮಾರ, ಪ್ರೊ. ವೈ.ಎ.ನೀರಡಗಿ, ಮಲ್ಲೇಶಪ್ಪ ಕುಂಬಾರ, ಡಾ. ಅಂಬಾರಾಯ ಹಾಗರಗಿ, ಅಶ್ಫಾಕ್ ಹುಸೇನ್ ಇದ್ದರು. ಕುಸುಮಾಬಾಯಿ ಎನ್ನೆಸ್ಸೆಸ್ ಗೀತೆ ಹಾಡಿದರು. ಭೀಮಾಶಂಕರ ಸ್ವಾಗತಿಸಿದರು. ಆನಂದಪ್ಪ, ರಾಜಕುಮಾರ, ಗುಂಡಪ್ಪ, ಕೀರ್ತಿ ವರ್ಮಾ, ಸುಜಾತ ಶಿಬಿರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ರಾಜು ಪಾಟೀಲ್ ವಂದಿಸಿದರು.


ಸಗರದಲ್ಲಿ ಬಸವ ಜಯಂತ್ಯುತ್ಸವ


ಶಹಾಪುರ: ತಾಲೂಕಿನ ಸಗರ ಗ್ರಾಮಲ್ಲಿ ಜಗದ್ಗುರು ಬಸವೇಶ್ವರ ಜಯಂತಿಯನ್ನು ಪ್ರತಿ ವರ್ಷದಂತೆ ಶ್ರೀಕಾಂತಗೌಡ ಸುಬೇದಾರ ಗೆಳೆಯರ ಬಳಗದ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ವಿವಿಧ ಮುಖ್ಯ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ನಂತರ ಧಾರ್ಮಿಕ ಸಭೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಸಗರ ಆನಂದಾಶ್ರಮದ ಶರಣಮ್ಮ ತಾಯಿ ಅವರು ವಹಿಸಿದ್ದರು. ಜಿಪಂ ಸದಸ್ಯರಾದ ನಾಗಣಗೌಡ ಸುಬೆದಾರ, ಲಿಂಗಣ್ಣ ಪಡಶೆಟ್ಟಿ, ಶಿವಣ್ಣ ದೇಸಾಯಿ, ಬಸ್ಸಣ್ಣ ಪೂಜಾರಿ, ಶಂಕರ ಪಡಶೆಟ್ಟಿ, ಮಾಹಾಂತೇಶ ಗುಗ್ಗರಿ, ಬಸವರಾಜ ಸಿಂಪಿಗೇರ, ಮಲ್ಲಿಕಾರ್ಜುನ ಗಾಯಿ, ಶರಣು ಸಜ್ಜನ, ಶಿವರೆಡ್ಡಿ ಮಲ್ಲೇದ ಹಾಗೂ ನೂರಾರು ಜನರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement