ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸವೇಶ್ವರ ಮೂರ್ತಿ ಭಗ್ನ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 4 May 2014, 2:51 am

ಚಿಂಚೋಳಿ: ತಾಲೂಕಿನ ಚಂದನಕೇರಾದಲ್ಲಿ ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ತಾಲೂಕು ಲಿಂಗವಂತ ತತ್ವ ಧರ್ಮ ಪ್ರಚಾರ ಸಂಸ್ಥೆ  ದುಷ್ಕರ್ಮಿಗಳನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನೆ ನಡೆಸಲಾಯಿತು. ಇದರಿಂದ ಎಲ್ಲ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಶರಣಪ್ಪಾ ಹಲಚೇರಿ, ಮಲ್ಲಿಕಾರ್ಜುನ ಪಾಲಾಮೂರ, ಸುಭಾಶ ಸೀಳಿನ್, ಸಿದ್ದು ಪಾಟೀಲ್ ಮೋಘಾ ಉಮೇಶ ಬೆಳಕೇರಿ, ನೀಲಕಂಠ ಸೀಳಿನ್, ರಾಜಶೇಖರ ಮುಸ್ತರಿ, ರಮೇಶ ಉಡಗಿ, ವೀರಣ್ಣ ಬಬಲಾದಿ, ಭೀಮಶೆಟ್ಟಿ, ಮಲ್ಲಿಕಾರ್ಜುನ, ಸಚ್ಚಿದಾನಂದ ಸುಂಕದ್, ಶಾಂತವೀರ ಹೀರಾಪೂರ, ನಾಗೇಶ ಪಾಲಾಮೂರ, ನಾಗಶೆಟ್ಟಿ ಭದ್ರಶೆಟ್ಟಿ, ಬಸವರಾಜ ಮಲಿ, ಸುರೇಶ ಕೊರವಿ, ಜಗನ್ನಾಥರೆಡ್ಡಿ, ನಂದಿಕುಮಾರ, ಇತರರು ಭಾಗವಹಿಸಿದ್ದರು. ಶಿರಸ್ತೇದಾರ ರವೀಂದ್ರ ದಾಮಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಂದ್ ಕರೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.


ಮುತ್ತಪ್ಪ ರೈ ಜನ್ಮ ದಿನ- ಹಣ್ಣು ಹಂಪಲು ವಿತರಣೆ

ಚಿತ್ತಾಪುರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಎನ್. ಮುತ್ತಪ್ಪ ರೈರವರ ಹುಟ್ಟುಹಬ್ಬದ ನಿಮಿತ್ತ ತಾಲೂಕು ಅಧ್ಯಕ್ಷ ವೀರೇಶ ಪಾಟೀಲ್ ನೇತೃತ್ವದಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಹುಟ್ಟು ಹಬ್ಬ ಆಚರಿಸಲಾಯಿತು. ಜಯ ಕರ್ನಾಟಕ ನಗರ ಘಟಕ ಅಧ್ಯಕ್ಷ ಬಸವರಾಜ ಮಡಿವಾಳ, ಶಿವು ಅರಬೋಳ, ಮಲ್ಲು ಪಾಟೀಲ್, ರಾಮು ಭಜಂತ್ರಿ, ನಾಗೇಶ ದೊಡ್ಮನಿ, ಜಗದೀಶ ಮಾನ್ವಿ, ರಾಘು ಪಾಟೀಲ್, ಸಾಬಣ್ಣ ಡಿಗ್ಗಿ, ರವಿ ತಳವಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement