ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಳಪೆ ಕಾಮಗಾರಿಗೂ ಫೇಮಸ್!

Rashmi Kasaragodu
Updated On : 6 May 2014, 12:11 pm

ಚಿಂಚೋಳಿ: ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದರೂ ಕಳಪೆ ಮಟ್ಟದ ಕಾಮಗಾರಿಗಳಲ್ಲಿ ತೀವ್ರ ಗಮನ ಸೆಳೆಯುತ್ತಿದೆ. ಇದಕ್ಕೆ ಸರ್ಕಾರಿ ಕಟ್ಟಡ, ರಸ್ತೆ, ಜಾನುವಾರುಗಳ ನೀರಿನ ತೊಟ್ಟಿ ಸಾಕ್ಷಿ. ಐನೋಳಿ ಗ್ರಾಪಂ ವ್ಯಾಪ್ತಿಯ ಚೌಕಿತಾಂಡಾ, ರಾಮಶೆಟ್ಟಿ ನಾಯಕ ತಾಂಡಾದಲ್ಲೂ ಕಳಪೆ ಕಾಮಗಾರಿಗಳು ನಡೆದಿರುವ ಆರೋಪ ಕೇಳಿಬಂದಿದೆ.
ಐನೋಳಿ ಗ್ರಾಪಂ ವತಿಯಿಂದ ದನಕರುಗಳಿಗೆ ಕುಡಿಯುವ ನೀರಿಗಾಗಿ ಮತ್ತು ತಾಂಡಾದ ಜನರಿಗೆ ಬಟ್ಟೆ ಒಗೆಯಲ್ಲಿ ನೀರಿನ ತೊಟ್ಟಿಯನ್ನು ಕಳೆದ 4 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ ಕಳೆಪೆಮಟ್ಟದ ಕಾಮಗಾರಿಯಿಂದಾಗಿ ನೀರಿನ ತೊಟ್ಟಿ ಒಡೆದು ಹೋಗಿ 3 ವರ್ಷ ಗತಿಸಿದರೂ ಈವರೆಗೆ ದನಕರುಗಳಿಗೆ ನೀರಿನ ತೊಟ್ಟಿ ನಿರ್ಮಿಸಿಲ್ಲ.
ರಾಮಶೆಟ್ಟಿ ಚೌಕಿ ತಾಂಡಾದಲ್ಲಿ ನೀರಿನ ತೊಟ್ಟಿ ಕಟ್ಟಿ ಕೆಲವೇ ದಿನಗಳಲ್ಲಿ ಒಡೆದು ಹೋಗಿದೆ. ಇದರ ಬಗ್ಗೆ ಗ್ರಾಪಂ ಅನುದಾನದಿಂದ ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪಿಡಿಒ, ಅಧ್ಯಕ್ಷರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯ ಮಾಜಿ ಅಧ್ಯಕ್ಷ ಇಬ್ರಾಹಿಂಸಾಬ ದೇಗಲಮಡಿ ದೂರಿದರು. ಸದ್ಯ ರಾಮಶೆಟ್ಟಿ ಚೌಕಿ ತಾಂಡಾದಲ್ಲಿ ದನಕರುಗಳಿಗೆ ಕುಡಿವ ನೀರಿನ ತೊಟ್ಟಿ ನಿರ್ಮಿಸುವ ತರ್ತು ಅಗತ್ಯವಿದೆ ಎಂದು ತಾಂಡದ ಜನರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement