ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಸಕ ರಮೇಶ್ ವಿರುದ್ಧ ಕೆಪಿಟಿಸಿಎಲ್ ನೌಕರರ ಸಂಘದಿಂದ ಪ್ರತಿಭಟನೆ

Rashmi Kasaragodu
Updated On : 6 May 2014, 12:11 pm

ಯಾದಗಿರಿ: ಕೋಲಾರದಲ್ಲಿ ನಡೆದ ಜಿಪಂ ಸಭೆಯಲ್ಲಿ ಶಾಸಕ ರಮೇಶಕುಮಾರ್ ಅವರು ಬೆವಿಕಂ ಸಿಬ್ಬಂದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪದಾಧಿಕಾರಿಗಳ ಬೃಹತ್ ಪ್ರತಿಭಟನೆ ನಡೆಸಿದರು.
ಶಾಸಕರ ಈ ಹೇಳಿಕೆಯಿಂದ ರಾಜ್ಯಾದ್ಯಂತ ವಿದ್ಯುತ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನೈತಿಕ ಸ್ಥೈರ್ಯ ಕುಸಿದಿರುತ್ತದೆ. ಭಯದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಶೇ.40ರಿಂದ 50ರಷ್ಟು ಹುದ್ದೆಗಳು ವಿದ್ಯುತ್ ಕಂಪನಿಗಳಲ್ಲಿ ಖಾಲಿ ಇದ್ದು ಶೇ.200ಕ್ಕೂ ಮಿಗಿಲಾಗಿ ಕಾರ್ಯಭಾರದ ಹೊರೆ ಹೆಚ್ಚಾಗಿದೆ. ಈ ಸನ್ನಿವೇಶದಲ್ಲಿ ನೌಕರರ ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಅಧಿಕಾರಿಗಳು ಹಾಗೂ ನೌಕರರ ಒಕ್ಕೂಟದ ಅಡಿಯಲ್ಲಿ ಶಾಸಕ ರಮೇಶಕುಮಾರ್ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಕೂಡಲೇ ಅವರ ಶಾಸಕತ್ವವನ್ನು ರದ್ದುಪಡಿಸಿ ಅವರ ಮೇಲೆ ಕಾನೂನು ಶಿಸ್ತುಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶ್ರೀನಿವಾಸ, ರಾಘವೇಂದ್ರ, ದೇವಿಂದ್ರಪ್ಪ, ಶಿವರಾಮಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement