ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಸ್ಯ ಪ್ರಜ್ಞೆಯಿಂದ ಸಮಸ್ಯೆ ನಿವಾರಣೆ

Rashmi Kasaragodu
Updated On : 6 May 2014, 12:11 pm

ಗುಲ್ಬರ್ಗ: ಐತಿಹಾಸಿಕವಾಗಿ ಹಾಸ್ಯಕ್ಕೆ ಪ್ರಸಿದ್ದರಾದ ತೆನಾಲಿ ರಾಮಕೃಷ್ಣ, ಬೀರಬಲ್ಲರಿಂದ ಹಿಡಿದು ನರಸಿಂಹರಾಜು, ಮಾಸ್ಟರ ಹಿರಣಯ್ಯ ಒಳಗೊಂಡು ಇಂದಿನ ಗಂಗಾವತಿ ಪ್ರಾಣೇಶ್‌ವರಗೆ ನಗೆ ತನ್ನ ಇರುವಿಕೆ ಮತ್ತು ಅವಶ್ಯಕತೆಯನ್ನು ಸಾರಿ ಹೇಳುತ್ತಲೇ ಇದೆ. ಇಂತಹ ನಗೆಯ ಮಹತ್ವವನ್ನು ಸಾರುವ ವಿಶ್ವ ನಗೆ ದಿನಾಚರಣೆಯನ್ನು ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನವು ವಿಶ್ವನಗೆ ದಿನಾಚರಣೆ ಹಮ್ಮಿಕೊಂಡಿದೆ.
ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಬೀಚಿರವರು ಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ನಗುವಿನ ಅಲೆಯ ಮೂಲಕ ವಿಡಂಬನೆಯ ಅಸ್ತ್ರ ಬಳಸಿ, ಮಾನಸಿಕ ಮಲೀನತೆಯನ್ನು ಮನ ಕಲಕುವ ರೀತಿ ಬಿಂಬಿಸಿ, ಪರಸ್ಪರ ಪ್ರೀತಿಯನ್ನು ಹಂಚಿದ ಸಾಮಾಜಿಕ ಪರಿವರ್ತನಾಕಾರರು ಎಂದು ಹೇಳಿದರು.
ಸಮಸ್ಯೆ ಎದುರಿಸಿ: ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಇಂದಿನ ವಿದ್ಯಾರ್ಥಿಗಳು ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕೆಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಸ್ಯ ಕಲಾವಿದ ಅನಂತ ಹರಸೂರ, ಗುಂಡಣ್ಣ ಡಿಗ್ಗಿ, ಶಿವಲಿಂಗಪ್ಪ ಪಾಟೀಲರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಸಂಪಾದಿಸಿರುವ ಬೀಚಿ ಅವರ ಬರವಣಿಗೆ ಸಂಗ್ರಹದ 'ತೋಚಿದ್ದು ಗೀಚಿದ್ದು' ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಎಂಎಸ್‌ಐ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಸ್.ಎಲ್, ಪಾಟೀಲ, ಡಾ. ಸಂತೋಷ ಶಂಕರನೂರ, ಶ್ರೀಕಾಂತ ಪಾಟೀಲ ತಿಳಗೂಳ ಮಾತನಾಡಿದರು. ಚನ್ನವೀರಪ್ಪ ಗುಡ್ಡಾ ಅಧ್ಯಕ್ಷತೆ ವಹಿಸಿದ್ದರು. ಶಂಕರ ಬಿರಾದಾರ, ಕೆ. ಗಿರಿಮಲ್ಲ, ಮಹಾದೇವ ಬಡಾ, ಶಿವಕುಮಾರ ಸಿ,ಎಚ್., ಶಿವರಾಜ ಅಂಡಗಿ, ನಾಗೇಂದ್ರ ಮಾಡ್ಯಾಳೆ, ಹಣಮಂತರಾಯ ಅಟ್ಟೂರ, ವಿನಾಯಕ ಜೋಶಿ, ವಡ್ಡಣಕೇರಿ, ಮಲ್ಲಿಕಾರ್ಜುನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement