ದುಶ್ಚಟಗಳಿಂದ ಯಾರೂ ಉದ್ಧಾರ ಆಗಿಲ್ಲ: ಸದಾಶಿವ ಸ್ವಾಮಿ
ಆಳಂದ: ಜೂಜು ಆಡಿ ಓಸಿ ಆಡಿ ಯಾರು ಆಸ್ತಿ ಗಳಿಸಿಲ್ಲ. ಹೊರತು ಅದರಿಂದ ಕಳಕೊಂಡವರೆ ಹೆಚ್ಚು. ಚಟಗಳಿಂದ ಹೊಲ- ಮನೆ ಕಳಕೊಂಡು ಬೀದಿಪಾಲಾಗಿದ್ದಾರೆ. ಅದಕ್ಕಾಗಿ ನೀವೆಲ್ಲಾ ಸದ್ಗುಣಗಳ ಭಿಕ್ಷೆ ಪಡೆದು ಜೀವನ ಸುಂದರವಾಗಿಸಿಕೊಳ್ಳಿ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿ ಹೇಳಿದರು.
ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ವಿರಕ್ತ ಮಠದ ಮಹಾಂತ ದೇವರ ಪಟ್ಟಾಭಿಷೇಕ ನಿಮಿತ್ತ ನಿಂಗದಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂಬ ಧಾರ್ಮಿಕ ಪಥಸಂಚಲನದಲ್ಲಿ ಮಾತನಾಡುತ್ತಿದ್ದರು.
ಹುಲಗಡ್ಡಿ ಮಠದ ಸಿದ್ದಲಿಂಗ ದೇವರು ಮಾತನಾಡುತ್ತಾ, ದುಶ್ಚಟಗಳಿಂದ ಈ ಕಾರ್ಯ ವ್ಯರ್ಥ ಮಾಡಿಕೊಳ್ಳದೆ ಸಮರ್ಥವಾಗಿಸಿಕೊಂಡು ಮಹಾತ್ಮರ ಸಂಗ ಬೆಳೆಸಿರಿ. ಜೀವನ ರಟ್ಟಿ ಮ್ಯಾಲ ದುಡಿದು ರೊಟ್ಟಿ ತಿಂದಾಗ ನೀವೂ ಗಟ್ಟಿಯಾಗುವಿರಿ ಎಂದರು.
ನಿಂಗದಳ್ಳಿಯ ಬಸವರಾಜ ಪಾಟೀಲ, ಸಿದ್ದರಾಮ ಕಿರನಳ್ಳಿ, ಸಿದ್ದರಾಮ ಮಾಸ್ತರ ಹಾಗೂ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು. ಸಲಗರದಲ್ಲಿ ಶಿವರಾಜ ಬಿರಜದಾರ, ಸಿದ್ದರಾಮ ಪಾಟೀಲ, ತೋಟಪ್ಪ ಬಿರಜದಾರ, ಅಶೋಕ ಪಾಟೀಲ, ಜೈಶೇಖರ ಪಾಟೀಲ, ಹಣಮಂತರಾವ್ ಬಿರಜದಾರ, ರೇವಣಪ್ಪ ಬೋರಗಾಂವ್, ಮಲ್ಲಿನಾಥ ಬೋರಗಾಂವ್, ಪಂಚಪ್ಪ ಪಾಟೀಲ, ಸೋಮಲಿಂಗ ಬಿರದಾರ ಭಾಗವಹಿಸಿದ್ದರು. ಮಲ್ಲಿನಾಥ ನಿಂಗಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.