ಪಿಂಚಣಿ ಸೌಲಭ್ಯಕ್ಕೆ ಮನವಿ
ಗುಲ್ಬರ್ಗ: ಜಿಲ್ಲಾ ಪಂಚಾಯಿತ್, ತಾಲೂಕ ಪಂಚಾಯಿತಿಗಳ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಎಚ್. ಕೆ. ಪಾಟೀಲರಿಗೆ ಮನವಿ ಮಾಡಿದೆ.
ಜಿಪಂ ಮತ್ತು ತಾಪಂ ನೌಕರರು ಸರ್ಕಾರಿ ನೌಕರರಲ್ಲವೆಂದು 2009ರಲ್ಲಿ ಸರ್ಕಾರ ಆದೇಶ ಹೊರಡಿಸಿ ಪಿಂಚಣಿ ಸ್ಥಗಿತಗೊಳಿಸಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ನಂತರ ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆಯಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಭಿಕ್ಷೆ ಬೇಡುತ್ತಿದ್ದಾರೆ:ರಾಜ್ಯದಲ್ಲಿ ಜಿಪಂ. ಮತ್ತು ತಾಪಂ. ನೌಕರರಲ್ಲಿ 160ಕ್ಕೂ ಹೆಚ್ಚು ಜನ ವಯೋನಿವೃತ್ತಿ ಹೊಂದಿದ್ದು, 50ಕ್ಕೂ ಹೆಚ್ಚು ಜನ ಸೇವಾ ಅವಧಿಯಲ್ಲಿಯೆ ನಿಧನ ಹೊಂದಿದ್ದಾರೆ. ಇವರ ಕುಟುಂಬಗಳು ಪಿಂಚಣಿ ಸೌಲಭ್ಯ ಸಿಗದೇ ಬೀದಿ ಪಾಲಾಗಿ ಭಿಕ್ಷೆ ಬೇಡುತ್ತಿದ್ದಾರೆ. ಆದ್ದರಿಂದ ಕೂಡಲೇ ಪಿಂಚಣಿ ನೀಡಲು ಆದೇಶ ಹೊರಡಿಸಲು ಸಹಕರಿಸುವಂತೆ ಸಂಘ ಸಚಿವರಲ್ಲಿ ಮನವಿ ಮಾಡಿದೆ.
ಗೌರಾವಾಧ್ಯಕ್ಷ ಸಿದ್ದಣ ಕೋಲ್ಹಾರ, ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ, ಖಜಾಂಚಿ ಚಂದ್ರಕಾಂತ ಏರಿ, ಶೌಕತಅಲಿ ಮುಂತಾದವರು ಇದ್ದರು.