ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಯಾಣ ದರ ಜನರಿಗೆ ಹೊರೆ: ಡಿಸಿಗೆ ಮನವಿ

Mainashree
Updated On : 7 May 2014, 10:21 am

ಗುಲ್ಬರ್ಗ: ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯುವಿಕೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಿರಾಶ್ರಿತ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಶೇಕಡಾ 8ರಷ್ಟು ದರ ಏರಿಕೆ ರದ್ದುಪಡಿಸಿ ರಾಜ್ಯದ ಬಡ ಜನತೆಗೆ ಹೊರೆಯಾಗದಂತೆ ಹಿಂದಿನ ಬಸ್ ದರ ಮುಂದುವರೆಸಬೇಕು. ರಾಜ್ಯದ ಪ್ರತಿಭಾವಂತ ಪಿಯುಸಿ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲ ದೃಷ್ಟಿಯಿಂದ ಲ್ಯಾಪಟಾಪ್ ಮತ್ತು ಹತ್ತನೇ ತರಗತಿ ವಿದ್ಯಾರ್ಥಿನಿಯರಿಗೆ ನ್ಯಾಪಕಿನ್ ಕೂಡಲೇ ಕಲ್ಪಿಸಬೇಕು. ಜಿಲ್ಲೆಯಲ್ಲಿ ಸುಮಾರು 3 ಸಾವಿರಕ್ಕಿಂತ ಹೆಚ್ಚು ನಿರಾಶ್ರಿತರು ಮನೆಗಳಿಲ್ಲದೆ ಬೀದಿಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಅಟಲ್ ಬಿಹಾರಿ ವಾಜಪೇಯಿ, ಬಸವ ವಸತಿ, ಡಾ.ಅಂಬೇಡ್ಕರ್ ಯೋಜನೆಯಡಿಯಲ್ಲಿ ಮನೆಗಳು ಮಂಜೂರು ಮಾಡಬೇಕು.
ಬಡವರಿಗೆ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಯ ನಾಗರಿಕರಿಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಜೋಳ ವಿತರಣೆ ಅನುಷ್ಠಾನಕ್ಕೆ ತರಬೇಕೆಂದು ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣ ಎಸ್ ಕೋರಿ, ರಾಜ್ಯಾಧ್ಯಕ್ಷ ಎಂ.ಡಿ. ರೌಫ್  ಬಿ. ಶೇಖ ಒತ್ತಾಯಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಸಾಬ್ ಬಿ. ಮುಲ್ಲಾ, ಉಪಾಧ್ಯಕ್ಷ ತಾಜೋದ್ದೀನ್  ಎಸ್. ಮೂಲಗೆ, ಉಪಾಧ್ಯಕ್ಷ ಗೋಮಾಬಾಯಿ ಎಸ್. ಪವಾರ, ಸಹ ಕಾರ್ಯದರ್ಶಿ ಮುನಿರಾ ಬೇಗಂ ಜಿ. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement