ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ

Mainashree
Updated On : 7 May 2014, 10:20 am

ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಮೇ 6
ಡೀಸೆಲ್ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ಹೆಚ್ಚಳದಿಂದ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ನಷ್ಟವಾಗಿರುವ ನೆಪವೊಡ್ಡಿ ಬಸ್ ಪ್ರಯಾಣ ದರ ಏರಿಸಿರುವ ಕ್ರಮ ಸರಿಯಲ್ಲವೆಂದು ಎಸ್‌ಯುಸಿಐ(ಸಿ) ಗುಲ್ಬರ್ಗ ಜಿಲ್ಲಾ ಸಮಿತಿ ಪಕ್ಷದ ಕಾರ್ಯದರ್ಶಿ ಎಚ್.ವಿ. ದಿವಾಕರ್ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಎದುರು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಗುಲ್ಬರ್ಗ ಜಿಲ್ಲಾ ಸಮಿತಿ ಹಮ್ಮಿಕೊಂಡಿದ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಪ್ರತಿಭಟನಾ ಪ್ರದರ್ಶನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಧನದಾಹಿ: ಮುಂದಿನ ದಿನಗಳಲ್ಲಿ ಬಸ್ ಪಾಸ್ ದರವನ್ನು ಏರಿಸುವುದಾಗಿ ಪ್ರಸ್ತಾಪಿಸಿರುವುದು ಸರ್ಕಾರದ ಕಾಳಜಿಯನ್ನು ತೋರಿಸುತ್ತದೆ. ಖಾಸಗಿ ಬಸ್‌ಗಳಿಗೆ ಮುಕ್ತ ಪರವಾನಗಿ ನೀಡುತ್ತಾ ಬಂದಿರುವ ಸರ್ಕಾರಗಳು ಸಾರಿಗೆ ಸಂಸ್ಥೆಯನ್ನು ಧನದಾಹಿ ಖಾಸಗಿ ಸಂಸ್ಥೆಗಳ ಮಡಿಲಿಗೆ ಹಾಕಲು ಹುನ್ನಾರ ನಡೆಸುತ್ತಿವೆ. ಸಂಸ್ಥೆಯೊಳಗಿನ ಭ್ರಷ್ಟಾಚಾರದಿಂದಾಗುವ ಭಾರಿ ನಷ್ಟವನ್ನು ತಡೆಗಟ್ಟುವ ಬದಲು, ಬಸ್ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುವ ಸರ್ಕಾರದ ಈ ನೀತಿಯು ಹಗಲು ದರೋಡೆಗೆ ಸಮಾನವಾದುದು ಎಂದು ಆರೋಪಿಸಿರು.
ಹಿಂಪಡೆಯಿರಿ: ರಾಜ್ಯಾದ್ಯಂತ ನಿತ್ಯ ಪ್ರಯಾಣ ಮಾಡುವ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನರು ಸೇರಿದಂತೆ ಎಲ್ಲಾ ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಬಸ್ ದರ ಏರಿಕೆ ಪ್ರಸ್ತಾಪವನ್ನು ಕೈ ಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ದರ ಏರಿಕೆ ವಾಪಸ್ ಪಡೆಯದಿದ್ದಲ್ಲಿ, ರಾಜ್ಯಾದ್ಯಂತ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಈ ಪ್ರಸ್ತಾಪವನ್ನು ಪ್ರತಿರೋಧಿಸಬೇಕೆಂದು ರಾಜ್ಯದ  ಜನತೆಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ವಿ. ನಾಗಮ್ಮಾಳ್, ವಿ.ಜಿ. ದೇಸಾಯಿ, ಎಸ್.ಎಂ. ಶರ್ಮಾ, ಮಹೇಶ ನಾಡಗೌಡ, ಶಂಕರ ಹೂಗಾರ, ಮಹೇಶ ಎಸ್.ಬಿ, ಡಾ. ಸೀಮಾ ದೇಶಪಾಂಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement