ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನುಷ್ಯ ಸಂಕುಲವನ್ನು ಕಟ್ಟಿದ್ದು ಬಸವಣ್ಣ

Mainashree
Updated On : 7 May 2014, 10:20 am

ಕ.ಪ್ರ. ವಾರ್ತೆ ್ಣ ಯಾದಗಿರಿ ್ಣ ಮೇ 6
ಜಾತಿ ವ್ಯವಸ್ಥೆಯಲ್ಲಿ ಹೂತುಹೋಗಿದ್ದ ಸಮಾಜದ ಜನಗಳಲ್ಲಿ ಜಾಗೃತಿಯನ್ನು ಉಂಟು ಮಾಡಿ, ಅವರೆಲ್ಲರ ಮೂಲಕ ಮನುಷ್ಯ ಸಂಕುಲವನ್ನು ಮತ್ತೆ ಕಟ್ಟುವ ಕ್ರಿಯೆಗೆ ಬಸವಣ್ಣನವರು ಅಹರ್ನಿಶಿ ದುಡಿದರು ಎಂದು ಖ್ಯಾತ ಸಾಹಿತಿ ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.
  ತಾಲೂಕಿನ ಶಿರವಾಳ ಗ್ರಾಮದಲ್ಲಿ ಬಸವ ಮಾರ್ಗ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಬಸವ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರು ಬಡವರ ನಿಧಿಯಾಗಿ, ಕಾರ್ಗತ್ತಲೆಯಲ್ಲಿ ಮೂಡಿದ ಬೆಳ್ಳಿಚುಕ್ಕಿಯಂತೆ ಎಲ್ಲರ ಮನಸ್ಸನ್ನು ಬೆಳಗಿಸಿದರು. ಅಲ್ಲಿ ಜ್ಞಾನದ ಜ್ಯೋತಿಯನ್ನು ಹಚ್ಚಿದ ಹೋರಾಟಗಾರರಾಗಿದ್ದರು ಎಂದರು.
ನ್ಯಾಯನಿಷ್ಠೂರ: ಅಧ್ಯಕ್ಷತೆ ವಹಿಸಿದ್ದ ಯುವ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಬಸವಣ್ಣನವರು ವಚನ ಸಾಹಿತ್ಯವನ್ನು ಯಾರು ಅಭ್ಯಾಸ ಮಾಡುತ್ತಾರೋ ಅಂತಹವರಲ್ಲಿ ಅವರಿಗೇ ಅರಿಯದಂತಹ ಕ್ಷಾತ್ರತೇಜ ಬರುತ್ತದೆ. ನ್ಯಾಯನಿಷ್ಠೂರತನದ ಜೊತೆಗೆ ಏನಿ ಬಂದಿರಿ ಹದುಳವೆ ಎಂದು ಸದುವಿನಯದಿಂದ ಕೇಳುವ ಗುಣಗಳು ಬರುತ್ತವೆ. ಬಹಳಷ್ಟು ಜನ ಮಹಾತ್ಮರು ದೇವರುಗಳನ್ನು ಕಲ್ಲು ಮಣ್ಣು ಹಾಗೂ ಲೋಹಗಳಿಂದ ಮಾಡಿದ ಗುಡಿ ಚರ್ಚು ಮಸೀದಿಗಳಲ್ಲಿ ಹುಡುಕಾಡಿದರೆ, ಬಸವಣ್ಣನವರು ಮಾತ್ರ ಆತ್ಮಸಾಕ್ಷಿಯೇ ದೇವರು ಎಂದು ಪ್ರತಿಪಾದನೆ ಮಾಡಿದರು ಎಂದು ಬಣ್ಣಿಸಿದರು.
  ಸಭೆಯಲ್ಲಿ ಸಾಹಿತಿ ಶಿವಣ್ಣ ಇಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಬಸವ ಕೇಂದ್ರದ ಗೌರವಾಧ್ಯಕ್ಷ ಮಹೇಶಗೌಡ ಮಾಲಿ ಪಾಟೀಲ, ಅಧ್ಯಕ್ಷ ರುದ್ರಗೌಡ ಮಾಲಿ ಪಾಟೀಲ, ಉಪಾಧ್ಯಕ್ಷ ಸುರೇಶ ಮಳಗಿ ಇತರರು ಇದ್ದರು. ಗುರು ಶಾಬಾದಿ ಸ್ವಾಗತಿಸಿದರು. ದುಂಡಪ್ಪ ಶಾಬಾದಿ ವಂದನಾರ್ಪಣೆ ಮಾಡಿದರು. ಮಲ್ಲಣ್ಣ ಸಾಹು ಹೈಯಾಳ ಕಾರ್ಯಕ್ರಮ ನಿರೂಪಿಸಿದರು.
  ಸಭೆಯಲ್ಲಿ ಶಾಂತಯ್ಯಸ್ವಾಮಿ ಗುಡಿಮಠ, ಮೃತ್ಯುಂಜಯ ಹಿರೇಮಠ, ಅಮರಪ್ಪಗೌಡ ಪೋ.ಪಾ. ಮಹೇಶ ಹಿರೇಮಠ, ಅಂಬ್ರೇಶ್ ತಳಿಬಿಡಿ, ದೇವು ಪತ್ತಾರ, ಕಾಳಪ್ಪ ಕಂಬಾರ, ಮಲ್ಲಿಕಾರ್ಜುನ ಕೋಲ್ಕರ್, ಸಂತೋಷ ಮಣ್ಣೂರ, ಪ್ರಕಾಶ ಖಾನಾಪುರ, ಗುರಣ್ಣಗೌಡ ಯಕ್ತಾಪುರ, ಶರಣಪ್ಪ ಮಳಗಿ, ಮಡಿವಾಳಪ್ಪ ಯಾಳಗಿ ಹಾಗೂ ಊರಿನ ಪ್ರಮುಖರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement