ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಸೆ ಮಣೆ ಏರಿದ 25 ಜೋಡಿ ವಧು ವರರು

Mainashree
Updated On : 9 May 2014, 11:16 am

ಕನ್ನಡಪ್ರಭ ವಾರ್ತೆ  ಶಹಾಪುರ  ಮೇ 8
ದಲಿತ ಸಂಘಟನೆಯ ಸಂಘಟನಾತ್ಮಕ ಕಾರ್ಯದೊಂದಿಗೆ ಸಮಾಜಮುಖಿ ಕಾರ್ಯಗಳ ಮೂಲಕ ಶೋಷಿತ ಸಮುದಾಯಗಳಲ್ಲಿ ವಿಶ್ವಾಸ ತುಂಬುತ್ತಿದ್ದು ಸಂತಸ ತಂದಿದೆ ಎಂದು ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ ತಿಳಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆಯಿಂದ ತಾಲೂಕಾ ಸಂಚಾಲಕ ಶಿವುಕುಮಾರ ತಳವಾರ ನೇತೃತ್ವದಲ್ಲಿ ಪಟ್ಟಣದ ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ ಜರುಗಿದ 25 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಲಿತಪರ ಸಂಘಟನೆಗಳು ಸಮುದಾಯದ ಹಿತಕ್ಕೋಸ್ಕರ, ಸಾಮರಸ್ಯದ ಬದುಕಿಗಾಗಿ, ಸರ್ಕಾರದ ಯೋಜನೆಗಳ ಸದುಪಯೋಗಕ್ಕಾಗಿ ಸಂಘಟನಾತ್ಮಕ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
 ದುಂದು ವೆಚ್ಚದ ವಿವಾಹಗಳಿಗೆ ಕಡಿವಾಣ ಹಾಕಿ ಸರ್ವರ ಸಹಕಾರದೊಂದಿಗೆ ಎಲ್ಲರನ್ನೂ ಒಂದೆಡೆ ಸೇರಿಸಿ ಸಾಮೂಹಿಕ ವಿವಾಹ ಕಾರ್ಯ ಮಾಡುವುದು ಸಂಘಟನೆಯ ಕಾರ್ಯದ ಮೇಲ್ಪಂಕ್ತಿಯಾಗಿದೆ ಎಂದ ಅವರು, ದಾಂಪತ್ಯ ಜೀವನದಲ್ಲಿ ಕಾಲಿರಿಸಿದ ಜೋಡಿಗಳು ಸುಂದರ, ಸರಳ, ಸುಖ ಜೀವನ ನಡೆಸಿ ಸಮಾಜದಲ್ಲಿ ಗೌರವಯುತವಾಗಿ ಬಾಳಿರಿ ಎಂದು ತಿಳಿಸಿದರು.
ಸರಳತೆಗೆ ಸಾಕ್ಷಿ: ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸಾಮೂಹಿಕ ವಿವಾಹಗಳು ಸರಳತೆಗೆ ಸಾಕ್ಷಿಯಾಗಿದ್ದು ಡಿಎಸ್‌ಎಸ್ ಉತ್ತಮ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಗಳಿಸಿದೆ ಎಂದರು.
ಬೌದ್ಧ ಧರ್ಮದ ಪ್ರಕಾರ ವಿವಾಹ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಸಂಘನಂದಾ ಭಂತೆ, ಸಾಮೂಹಿಕ ವಿವಾಹ ಅತ್ಯಂತ ಪುಣ್ಯಮಯ ಕಾರ್ಯವಾಗಿದ್ದು ದಾಂಪತ್ಯ ಜೀವನ ಸುಖಮಯವಾಗಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement