ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸತ್ಯಂ ಕಾಲೇಜಿಗೆ ಉತ್ತಮ ಫಲಿತಾಂಶ

Vishwanath S
Updated On : 10 May 2014, 12:00 pm

ಗುಲ್ಬರ್ಗ: ನಗರದ ಸತ್ಯನಾರಾಯಣ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಸತ್ಯಂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಹ್ಮದ್ ಉಸ್ಮಾನ್ ಪಿಸಿಎಂ ನಲ್ಲಿ ಶೇ 92.3, ಪಿಸಿಬಿನಲ್ಲಿ ಶೇ 91.3 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಅಶ್ವಿನಿ , ಪ್ರದೀಪ, ಮಾಧುರಿ, ಸ್ನೇಹಾ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಗುರುಕುಲ ವಿದ್ಯಾ ಸಂಸ್ಥೆ  
ಗುಲ್ಬರ್ಗ: ಪ್ರತಿಷ್ಠಿತ ಗುರುಕುಲ ವಿದ್ಯಾಸಂಸ್ಥೆಯ ವಿಜ್ಞಾನ ಪಿಯು ಕಾಲೇಜು ಪಿಯುಸಿ ಪರೀಕ್ಷೆಯಲ್ಲಿ ಅಗಾಧ ಸಾಧನೆ ಮಾಡಿದೆ. ಪರೀಕ್ಷೆ ಬರೆದ 381 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.
  ಕಾಲೇಜಿನ ನಿಶ್ಚಲ್ 600 ಕ್ಕೆ 580 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. 223 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದು, 32 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಗಳಿಸಿದ್ದಾರೆ. ಸತೀಶ 569 ಮತ್ತು ಖುರ್ಷಿದಾ ಬೇಗಂ 568 ಅಂಕ ಗಳಿಸಿ ಅನುಕ್ರಮವಾಗಿ ಕಾಲೇಜಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.  
   ದ್ಯಾರ್ಥಿಗಳ ಸಾಧನೆಗೆ ಗುರುಕುಲ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಜಾಜಿ,  ಪ್ರಾಚಾರ್ಯ, ಶೈಕ್ಷಣಿಕ ನಿರ್ದೇಶಕ ಪ್ರಹ್ಲಾದ ಭುರ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀಗುರು ವಿದ್ಯಾಪೀಠ
ಗುಲ್ಬರ್ಗ: ಖಣದಾಳ-ಇಟಗಾ ಕ್ರಾಸಿನಲ್ಲಿರುವ ಶರಣಮ್ಮ ಡಿಗ್ಗಾವಿ ಸ್ಮಾರಕ ಶಿಕ್ಷಣ ಸಂಸ್ಥೆಯ ಶ್ರೀಗುರು ವಿದ್ಯಾಪೀಠದ ವಸತಿ ವಿಜ್ಞಾನ ಸ್ವತಂತ್ರ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 98.2ರಷ್ಟು ಫಲಿತಾಂಶ ಗಳಿಸಿ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 219 ವಿದ್ಯಾರ್ಥಿಗಳ ಪೈಕಿ 80 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದು ಅಗ್ರಶ್ರೇಣಿಯಲ್ಲಿದ್ದಾರೆ. ಸುಮನೆ ಶೇ. 98.02 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಅಗ್ರ ಸ್ಥಾನ ಪಡೆದಿದ್ದಾಳೆ. 128 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಆರು ವಿದ್ಯಾಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ವಿ.ಡಿಗ್ಗಾವಿ, ಪ್ರಾಚಾರ್ಯ ರವೀಂದ್ರ ಬಳಗಾರ ಹರ್ಷ ವ್ಯಕ್ತಪಡಿಸಿದ್ದಾರೆ.   
ನಿಸರ್ಗ ಪಿಯು ಕಾಲೇಜು
ಗುಲ್ಬರ್ಗ: ವಿನಾಯಕ ಶಿಕ್ಷಣ ಸಂಸ್ಥೆಯ ನಿಸರ್ಗ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಪರೀಕ್ಷೆಯಲ್ಲಿ 109 ವಿದ್ಯಾರ್ಥಿಗಳು ಹಾಜರಾಗಿದ್ದು, 33 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ 76 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಅಧ್ಯಕ್ಷೆ ಪಾಲಾಕ್ಷಿ. ಸಿ ಹಾಗೂ ಪ್ರಾಂಶುಪಾಲರು ಪಿ.ಎಂ. ಚಂದ್ರಶೇಖರ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement