ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸರ್ವಜ್ಞ, ಆರ್‌ವಿ, ನ್ಯೂ ಕನ್ನಡ ಪಿಯು ವಿದ್ಯಾರ್ಥಿಗಳ ಸಾಧನೆ

Mainashree
Updated On : 11 May 2014, 10:57 am

ಯಾದಗಿರಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಕಾಲೇಜುಗಳು ಉತ್ತಮ ಫಲಿತಾಂಶ ಪಡೆದಿವೆ. ನಗರದ ಚನ್ನಾರೆಡ್ಡಿ ಪಾಟೀಲ ಪ್ರತಿಷ್ಠಾನದ ಸರ್ವಜ್ಞ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಐಐಟಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಸರ್ವಜ್ಞ ಕಾಲೇಜು: ನಗರದ ಚೆನ್ನಾರೆಡ್ಡಿ ಪಾಟೀಲ ವಿದ್ಯಾರ್ಥಿ ಪ್ರತಿಷ್ಠಾನದ ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಶೇ. 84ರಷ್ಟು ಫಲಿತಾಂಶ ಪಡೆದಿದೆ. ಕಾಲೇಜಿನ ಭರತ್ ರಾಠೋಡ್ ಮತ್ತು ಅಜಯ್‌ಕುಮಾರ್, ಅಖಿಲ ಭಾರತ ಮಟ್ಟದ ಸ್ವರ್ಧಾತ್ಮಕ ಪರೀಕ್ಷೆ ಐಐಟಿ ಮುಖ್ಯ ಪರೀಕ್ಷೆಯಲ್ಲಿ, ತೇರ್ಗಡೆಯಾಗಿದ್ದು, ಪ್ರತಿಷ್ಠಿತ ಕಾಲೇಜುಗಳಿಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಾಲ್ವರು ಉನ್ನತ ಶ್ರೇಣಿ, 26 ವಿಧ್ಯಾರ್ಥಿಗಳು ಪ್ರಥಮ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ನಿಖಿಲ್‌ಕುಮಾರ್ ಶೇ. 92.6, ಶಾಂತಾ ಶೇ. 92.2, ಅಜಯಕುಮಾರ ಶೇ 89.3, ಭರತಕುಮಾರ ರಾಠೋಡ ಶೇ.87.6 ಅಂಕ ಗಳಿಸಿದ್ದಾರೆ.
ಜಿಲ್ಲೆಯ ಇತಿಹಾಸದಲ್ಲೆ ಐಐಟಿ ಪ್ರವೇಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಪ್ರೊ. ಚೆನ್ನಾರೆಡ್ಡಿ ಪಾಟೀಲ, ಗೀತಾ ಪಾಟೀಲ, ನಿಂಗಾರೆಡ್ಡಿ ಪಾಟೀಲ, ಬಿ.ಎಚ್.ಕರುಣೇಶ, ಪ್ರಾಂಶುಪಾಲ ರವೀಂದ್ರ ಬಾಬು ಅಭಿನಂದಿಸಿದ್ದಾರೆ.
ಆರ್.ವಿ ಕಾಲೇಜು: ನಗರದ ಆರ್.ವಿ ವಿಜ್ಞಾನ ಪದವಿಪೂರ್ವ ಕಾಲೇಜು ಶೇ. 83ರಷ್ಟು ಫಲಿತಾಂಶ ಪಡೆದಿದೆ. ನಾಲ್ವರು ವಿದ್ಯಾರ್ಥಿಗಳು ಉನ್ನತ ಶ್ರೇಣಿ, 27 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಏಳು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಮಧುವತಿ (ಶೇ.91.6), ಬಸವಜ್ಯೋತಿ (ಶೇ.90.5), ನೇತ್ರಾವತಿ (ಶೇ.87.16), ಜೈವೀರೇಶ (ಶೇ. 85.16) ಉತ್ತಮ ಸಾಧನೆ ಮಾಡಿದ್ದು  ಸಂಸ್ಥೆ ಅಧ್ಯಕ್ಷೆ ಕಮಲಾ ದೇವರಕಲ್, ಪ್ರಾಚಾರ್ಯ ಸುಚೇತಾ ಹೊನ್ನಳ್ಳಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.
ನ್ಯೂ ಕನ್ನಡ ಕಾಲೇಜು: ನಗರದ ನ್ಯೂ ಕನ್ನಡ ಪದವಿಪೂರ್ವ ಕಾಲೇಜಿಗೆ ಕಲಾ ವಿಭಾಗದಲ್ಲಿ ಶೇ.80 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಕಲಾ ವಿಭಾಗದ 101 ವಿಧ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇಬ್ಬರು ಉನ್ನತ ಶ್ರೇಣಿ, 28 ವಿಧ್ಯಾರ್ಥಿಗಳು ಪ್ರಥಮ ದರ್ಜೆ, 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 22 ವಿಧ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ ಉನ್ನತ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ಹಾಗೂ ಆರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ರುದ್ರಪ್ಪ ನಾಡಗೌಡ, ಕಾರ್ಯದರ್ಶಿ ಸಿದ್ರಾಮಪ್ಪ ಚೆಗುಂಟಾ, ಪ್ರಾಚಾರ್ಯ ರಘುನಾಥ ರೆಡ್ಡಿ ಪಾಟೀಲ, ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement