ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ ಫಲಿತಾಂಶ: ಸಾಧನೆಗಳ ಸರಮಾಲೆ

Lingaraj Badiger
Updated On : 14 May 2014, 11:14 am

ಗುಲ್ಬರ್ಗ: ರಾಜ್ಯದ ಗುಲ್ಬರ್ಗ, ಮೈಸೂರು ಮತ್ತು ದಾವಣಗೆರೆ ನಗರಗಳಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪ್ರೌಢಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದಿವೆ. ಗುಲ್ಬರ್ಗ ಪ್ರೌಢಶಾಲೆಯ ಆರು ಅಂಧ ವಿದ್ಯಾರ್ಥಿಗಳು, ದಾವಣಗೆರೆ ಪ್ರೌಢಶಾಲೆಯ ಒಂಬತ್ತು ಮತ್ತು ಮೈಸೂರು ಪ್ರೌಢಶಾಲೆಯ ನಾಲ್ಕು ಅಂಧ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಈ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ಗುಲ್ಬರ್ಗ ಶಾಲೆಯ ವಿದ್ಯಾರ್ಥಿ ಶಿವರಾಯ 513 ಅಂಕ ಪಡೆದು ಶೇ. 82.08ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ದಾವಣಗೆರೆ ಪ್ರೌಢಶಾಲೆಯಲ್ಲಿ 475 ಅಂಕ ಪಡೆದು ಪಾಸಾಗಿರುವ ವಿದ್ಯಾರ್ಥಿಯ ಫಲಿತಾಂಶ ಶೇ. 75ರಷ್ಟು ಇದೆ. ಮೈಸೂರು ಪ್ರೌಢಶಾಲೆಯಲ್ಲಿ 485 ಅಂಕ ಪಡೆದು ಪಾಸಾಗಿರುವ ವಿದ್ಯಾರ್ಥಿಯ ಫಲಿತಾಂಶ ಶೇ. 77 ರಷ್ಟು ಇದೆ.
ನಾಲ್ಕನೇ ವರ್ಷಕ್ಕೆ ಅಂಧತ್ವಕ್ಕೆ ತುತ್ತಾದ ಗುಲ್ಬರ್ಗ ಶಾಲೆಯ ವಿದ್ಯಾರ್ಥಿ ಶಿವರಾಯ ತಂದೆ ಸುಭಾಸ್ ಚಿತ್ತಾಪುರ ತಾಲೂಕಿನ ದೇವತೇಗನೂರು ಗ್ರಾಮದವ. ಶಾಲೆಯಲ್ಲಿ 2004ನೇ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದು, ಸರ್ಕಾರದಿಂದ ಪ್ರತಿ ತಿಂಗಳು ಸಿಗುವ 1200 ರುಪಾಯಿ ಮಾಸಾಶನ ಹಾಗೂ ಅಣ್ಣಂದಿರು ನೀಡುವ ಅಲ್ಪಸ್ವಲ್ಪ ಹಣದಿಂದ ಓದಲು ಸಾಧ್ಯವಾಯಿತು ಎನ್ನುತ್ತಾನೆ. ಬಡತನದಲ್ಲಿರುವ ನನ್ನ ಕುಟುಂಬದಲ್ಲಿ ಯಾರೂ ಓದಿರಲಿಲ್ಲ. ನನ್ನಲ್ಲಿ ಓದುವ ಛಲವಿದ್ದು, ಓದು ಮುಂದುವರೆಸಿ ಶಿಕ್ಷಕನಾಗುವ ಆಸೆಯಿದೆ ಎಂದು ಅಭಿಪ್ರಾಯ ಪಡುತ್ತಾನೆ. ಇದೇ ಶಾಲೆಯ ಇನ್ನೊಬ್ಬ ವಿದ್ಯಾರ್ಥಿ ನಾಗರಾಜ್ ತಂದೆ ಲಕ್ಷ್ಮಣ ಯಾದಗಿರಿ ಜಿಲ್ಲೆಯ ಭೀಮನಳ್ಳಿ ಗ್ರಾಮದವ. ಶಾಲೆಯಲ್ಲಿ 2004ನೇ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದಿರುವ ಈತ ಹುಟ್ಟು ಕುರುಡನಾಗಿದ್ದಾನೆ. ಪರೀಕ್ಷೆಯಲ್ಲಿ ಒಟ್ಟು 489 ಅಂಕಗಳೊಂದಿಗೆ ಶೇ. 78.24 ರಷ್ಟು ಫಲಿತಾಂಶ ಹೊಂದಿರುವ ಈತ ನ್ಯಾಯವಾದಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾನೆ.
ಸರ್ಕಾರಿ ಪ್ರೌಢಶಾಲೆ ಸಾಧನೆ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಅಂಧ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಆರು ಮಕ್ಕಳಲ್ಲಿ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಿವರಾಯ(ಶೇ.82), ನಾಗರಾಜ(ಶೇ.78.24), ನಿಂಗಪ್ಪ(ಶೇ.78.08), ಮಲ್ಲಿಕಾರ್ಜುನ(ಶೇ.75.2), ಆರಿಫ್(ಶೇ.73.32) ಫಲಿತಾಂಶ ಪಡೆದಿದ್ದಾರೆ.
ನಾರಾಯಣ ಪ್ರೌಢಶಾಲೆಗೆ ಶೇ.100 ಫಲಿತಾಂಶ(ಆಳಂದ ವರದಿ): ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢಶಾಲೆ ಆಳಂದ ವಿದ್ಯಾರ್ಥಿನಿ ಅಕ್ಷತಾ ಮಲ್ಲಸರ್ಜಾ ಪಾಟೀಲ್ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 592(ಶೇ. 94.72) ಅಂಕಗಳನ್ನು ಪಡೆದು  ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಶಾಲೆ ಮುಖ್ಯೋಪಾಧ್ಯಾಯ ಎಲ್.ಎಸ್. ಬೀದಿ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 100 ರಷ್ಟು ಫಲಿತಾಂಶ ಬಂದಿದೆ. ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಅಕ್ಷತಾ ಮಲ್ಲಷರ್ಜ ಪಾಟೀಲ್- 592 (ಶೇ.94.72), ಸ್ನೇಹಾ ತಾನಾಜಿ ಕಾಂಬಳೆ-587 (ಶೇ.93.92), ಗುರುಪ್ರಸಾದ ಚನ್ನಪ್ಪಾ ಗುಳೇದಗುಡ್ಡ - 570 (ಶೇ. 91.29) ಸೌಭಾಗ್ಯ ಶರಣಯ್ಯ ಮಠಪತಿ-567 (ಶೇ.90.72), ಸಾಗರ ಶಿವಶರಣ-560(ಶೇ.89.60), ಸುಜಾತಾ ಮಲ್ಲೇಶಪ್ಪಾ-556 (ಶೇ.88.96), ಆನಂದಕುಮಾರ ಸೋಮಲಿಂಗ ಅಷ್ಟಗೆ-554 (ಶೇ.88.64),       ಸುನಂದಾ ಸೈಬಣ್ಣಾ-546 (ಶೇ.87.36), ಸ್ವಾತಿ ಮಲ್ಲೇಶಿ ಕುಂಬಾರ-543(ಶೇ.86.88), ಶ್ರೀಮಂತ ಈರಣ್ಣ-534 (ಶೇ.85.44), ಸುಗುರೇಶ ಶೀವಶರಣಯ್ಯಾ ಸ್ವಾಮಿ-533 (ಶೇ.85.28) ನಿಜಗುಣ ಸಂಜಯಕುಮಾರ ಬುಳ್ಳಾ-533 (ಶೇ.85.28) ಪಡೆದು ಅಗ್ರಶ್ರೇಣಿಯಲ್ಲಿ (ಡಿಸ್ಟಿಂಕ್ಷನ್‌ನಲ್ಲಿ) ಉತ್ತಿರ್ಣರಾಗಿದ್ದಾರೆ. ಶಾಲೆಗೆ ಅಗ್ರಶ್ರೇಣಿಯಲ್ಲಿ (ಡಿಸ್ಟಿಂಕ್ಷನ್)-12, ಪ್ರಥಮ ಸ್ಥಾನ-50, ದ್ವಿತೀಯ ಸ್ಥಾನ- 16 ಹಾಗೂ ತೃತೀಯ ಸ್ಥಾನದಲ್ಲಿ-3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಗುರುಗಳು ತಿಳಿಸಿದ್ದಾರೆ.
ತಾಲೂಕಿಗೆ ವಿದ್ಯಾಸಾಗರ ಪ್ರಥಮ: ಆಳಂದ ಪಟ್ಟಣದ ಎಂಎಆರ್‌ಜಿ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾಸಾಗರ ಎಲ್. ತಳಕೇರಿ ಶೇ 96.8 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈ ಕುರಿತು ಪ್ರಕಟಣೆ ನೀಡಿರುವ ಮುಖ್ಯಗುರು ಮಲ್ಲಿಕಾರ್ಜುನ ತುಕಾಣಿ, ವಿದ್ಯಾಸಾಗರ ಪಡೆದ ಒಟ್ಟು ಅಂಕ 625ರ ಪೈಕಿ 605 (ಶೇ 96.8) ಅಂಕ ಪಡೆದಿದ್ದಾನೆ. ಶ್ವೇತಾ ಎಸ್. ಮೋರೆ, 580 (ಶೇ 92.8) ಅಂಕ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ - 65, ಉನ್ನತ ಶ್ರೇಣಿ - 5, ಪ್ರಥಮ - 30, ದ್ವಿತೀಯ -16, ತೃತೀಯ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅಲ್ಲದೆ ಶಾಲೆಯ ಶೇ. 93.84ರಷ್ಟು ಫಲಿತಾಂಶ ದೊರೆತಿದೆ ಎಂದು ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ತುಕಾಣಿ  ತಿಳಿಸಿದ್ದಾರೆ.
ಎಂಜಿಎಂಜಿ ಕನ್ಯಾಶಾಲೆಗೆ ಅಗ್ರಶ್ರೇಣಿ: ಆಳಂದ ಪಟ್ಟಣದ ಮಾತೋಶ್ರೀ ಗಂಗಮ್ಮಾ ಮೊಗಲಯ್ಯಾ ಗುತ್ತೇದಾರ ಕನ್ಯಾಪ್ರೌಢಶಾಲೆಗೆ 10ನೇ ತರಗತಿ ಪರೀಕ್ಷೆಯಲ್ಲಿ 11 ವಿದ್ಯಾರ್ಥಿನಿಯರು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬುಕ್ಕೆ  ತಿಳಿಸಿದ್ದಾರೆ.
ಶಾಲೆಯ ಒಟ್ಟು ಪರೀಕ್ಷೆಗೆ ಹಾಜರಾದವರು 66, ಪಾಸಾದವರು 63, ಒಟ್ಟು ಫಲಿತಾಂಶ ಶೇ. 96ರಷ್ಟು  ಬಂದಿದೆ. 27 ಪ್ರಥಮ, 13 ದ್ವಿತೀಯ, 12 ತೃತೀಯ ಸ್ಥಾನದಲ್ಲಿ ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ಸಿಂಧುಶ್ರೀ ಚಂದ್ರಕಾಂತ ಶೇ. 94, ಅನುಷಾ ತುಕಾರಾಮ ಶೇ. 91, ಸುಸ್ಮಿತಾ ದಯಾನಂದ ಶೇ. 90 ಅಂಕ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಮಾತೃ ಮಂದಿರ ಪ್ರೌಢಶಾಲೆಗೆ ಶೇ.98 ಫಲಿತಾಂಶ(ಚಿಂಚೋಳಿ ವರದಿ): ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಚಾಲಿತ ಮಾತೃ ಮಂದಿರ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಒಟ್ಟು 57 ವಿದ್ಯಾರ್ಥಿಗಳು ಹಾಜರಾಗಿದ್ದರು. ಅಗ್ರಶ್ರೇಣಿಯಲ್ಲಿ- 7, ಪ್ರಥಮ- 26 ದ್ವಿತೀಯ- 12 ಹಾಗೂ ತೃತೀಯ ಶ್ರೇಣಿಯಲ್ಲಿ- 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವೆಂಕಟೇಶರೆಡ್ಡಿ ಜಗನ್ನಾಥರೆಡ್ಡಿ- 584 ಅಂಕ, ಸೈಯದ್ ಅಶ್ವಾಕ್ ಅಹಮದ್ ಸೈಯದ್ ಯೂನುಸ್ ಅಲಿ- 567, ಪಲ್ಲವಿ ಈರಪ್ಪ- 558, ಶ್ರಾವ್ಯ ಹಣಮಂತರಾವ- 554, ಮಹ್ಮದ್ ಅದಿಲ್‌ಬೇಗ್ ಅಯ್ಯೂಬ್ ಬೇಗ್- 553, ಶಿವಾನಿ ಗಿರಿರಾಜ ಸಜ್ಜನಶೆಟ್ಟಿ- 546, ಶ್ರೀಹರ್ಷ ಅಶೋಕ ಪಾಟೀಲ್- 536 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಗೆ ಸದಾಶಿವ ಸ್ವಾಮೀಜಿ, ಬಸವರಾಜ ಪಾಟೀಲ್ ಸೇಡಂ, ಡಾ. ಉದಯಕುಮಾರ ಶಹಾ, ಡಾ.ನಾಗರೆಡ್ಡಿ ಪಾಟೀಲ್ ಅಭಿನಂದಿಸಿದ್ದಾರೆ.
ಶಿವಾನಂದಗೆ ಶೇ.91.36 ಅಂಕ(ಜೇವರ್ಗಿ ವರದಿ): ತಾಲೂಕಿನ ಸೊನ್ನದ ಶಿವಾನಂದ ಶಿವಯೋಗಿ ಪ್ರೌಢಶಾಲೆ ವಿದ್ಯಾರ್ಥಿ ಶಿವಾನಂದ ಶರಣಬಸಪ್ಪ ಸಲಗರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 571 ಅಂಕ(ಶೇ.91.36) ಪಡೆದಿದ್ದಾನೆ. ಕನ್ನಡ- 118, ಇಂಗ್ಲಿಷ್- 96, ಹಿಂದಿ- 94, ಗಣಿತ- 95, ವಿಜ್ಞಾನ- 72, ಸಮಾಜ ವಿಜ್ಞಾನ- 96 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಸಂಸ್ಥೆ ಅಧ್ಯಕ್ಷ ಡಾ. ಶಿವಾನಂದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.


ಅಕ್ಷತಾ ಜಿಲ್ಲೆಗೆ ಪ್ರಥಮ
ಗುಲ್ಬರ್ಗ: ನಗರದ ಶರಣಬಸವೆಶ್ವರ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಅಕ್ಷತಾ ಬಸಂತರಾವ್ ಮಾಲಿಪಾಟೀಲ್ ಅದ್ವಿತೀಯ ಸಾಧನೆ ಮಾಡಿ(625ಕ್ಕೆ 605 ಅಂಕ) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಗಳ ಈ ಸಾಧನೆ ಕಂಡು ಅಪ್ಪ ಬಸಂತರಾವ್ ಮಾಲಿಪಾಟೀಲ, ತಾಯಿ ಮೀನಾಕ್ಷಿ ಹೆಮ್ಮೆಪಟ್ಟುಕೊಂಡಿದ್ದಾರೆ. ಅಕ್ಷತಾ ಓದಿನಷ್ಟಲ್ಲೇ ಅಲ್ಲ, ಬದಲಿಗೆ ಪ್ರಬಂಧ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಬಹುಮಾನ ಮುಡಿಗೇರಿಸಿಕೊಂಡ ಪ್ರಯತ್ನವಾದಿ. ಆಕೆಯೇ ಹೇಳುವಂತೆ ನಾನು ದಿನಕ್ಕೆ ತಾಸುಗಟ್ಟಲೇ ಓದಲ್ಲ, ಶಾಲೆಯಲ್ಲಿ ನಮ್ಮ ಟೀಚರ್ ಹೇಳಿಕೊಟ್ಟದನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿದ್ದೇನೆ. ಮನೆಗೆ ಬಂದು ಇನ್ನೊಮ್ಮೆ ಓದಿಕೊಳ್ಳುತ್ತಿದ್ದೆ. ಡೌಟಿದ್ದರೆ ಮರು ದಿನ ಪರಿಹಾರ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾಳೆ. ಪಿಯುಸಿ ವಿಜ್ಞಾನ ತೆಗೆದುಕೊಂಡು ವೈದ್ಯೆಯಾಗುವ ಆಸೆಯಿಟ್ಟುಕೊಂಡಿದ್ದಾಳೆ. ಮಗಳ ಕನಸಿಗೆ ರೈತ ಅಪ್ಪ ಬಣ್ಣ ಹಚ್ಚಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಸಾಧನೆಯ ಹಾದಿಯಡೆಗೆ ಹೆಜ್ಜೆ ಹಾಕುವುದೊಂದೇ ಬಾಕಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement