ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗ್ರಾಪಂ ಅವ್ಯವಹಾರ ತನಿಖೆಗೆ ಸೂಚನೆ

Lingaraj Badiger
Updated On : 19 May 2014, 11:15 am

ಯಾದಗಿರಿ: 2013- 14ನೇ ಸಾಲಿನ ಹೊನಗೇರಾ ಗ್ರಾಮ ಪಂಚಾಯಿತಿ ಅರಣ್ಯ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದು, ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಯಾದಗಿರಿ ತಾಲೂಕಿನ ಹೋನಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಿಯಮಾವಳಿಗಳನ್ನು ಮೀರಿ ಕಾರ್ಯನಿರ್ವಹಿಸಿದ್ದ ಹೋನಗೇರಾ ಪಂಚಾಯಿತಿಯ ಪಂಪ್ ಆಪಟೇಟರ್, ಪಿಡಿಒ ಸೇರಿದಂತೆ ಇನ್ನಿತರರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಸಿಇಒ ಎಸ್.ಎ. ಜಿಲಾನಿ ನಿರ್ದೇಶನ ನೀಡಿದ್ದಾರೆ. ಈ ಮಧ್ಯೆ ಪಂಚಾಯಿತಿ ಅಧ್ಯಕ್ಷರು ಪ್ರತ್ಯೇಕ ದೂರು ಸಲ್ಲಿಸಿ ತಮ್ಮ ಗಮನಕ್ಕೆ ಬಾರದಂತೆ ಅಧಿಕಾರಿಗಳು 12 ಲಕ್ಷ ಹಣವನ್ನು ಖಾತೆಗೆ ವರ್ಗಾವಣೆ ಮಾಡಿರುವುದು ಅವ್ಯವಹಾರ ನಡೆದಿದೆ ಎನ್ನಲು ಸಾಕ್ಷಿ ಎಂದು ಹೇಳಿದ್ದರಿಂದ ಈ ಮೊತ್ತವನ್ನು ಸಹ ಬಿಡುಗಡೆ ಮಾಡದೇ ತಡೆಹಿಡಿದು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

4 ಲಕ್ಷ ಮೌಲ್ಯದ ವೈರ್ ಭಸ್ಮ
ಯಾದಗಿರಿ: ವಿದ್ಯುತ್ ಸರಬರಾಜು ವೈರ್‌ಗಳ ಡ್ರಮ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಗರದ ಜೆಸ್ಕಾಂ ಕಚೇರಿಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಜೆಸ್ಕಾಂ ಕಚೇರಿ ಸ್ಟೋರ್‌ನಲ್ಲಿ ಇಡಲಾಗಿದ್ದ ವೈರ್‌ಗಳ ಡ್ರಮ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಂದಾಜು 4 ಲಕ್ಷ ಮೌಲ್ಯದ ವೈರ್‌ಗಳು ಭಸ್ಮಗೊಂಡಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ಗೊತ್ತಾಗಿಲ್ಲ ಎಂದು ಜೆಸ್ಕಾಂ ಎಇಇ ನಾಗರಾಜ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement