ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾದಗಿರಿ ಕ್ಷೇತ್ರದಲ್ಲಿ 'ಕೈ'ಗೆ ಬೆಂಬಲ: ಕಂದಕೂರ

Lingaraj Badiger
Updated On : 19 May 2014, 11:15 am

ಯಾದಗಿರಿ: ರಾಯಚೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಅವರ ಗೆಲುವಿಗೆ ಯಾದಗಿರಿ ಮತಕ್ಷೇತ್ರ ಸುಮಾರು 4,000 ಅಧಿಕ ಮತಗಳ ಅಂತರದಿಂದ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯುವ ಕಾಂಗ್ರೆಸ್ ಪಡೆಯ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಶಾಸಕ ಡಾ. ಎ.ಬಿ. ಮಾಲಕರೆಡ್ಡಿಯವರು ತಮ್ಮ ಕಾರ್ಯಕರ್ತರೊಂದಿಗೆ ಸತತ ಒಂದು ತಿಂಗಳ ಕಾಲ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಕಾಂಗ್ರೆಸ್ ಸಾಧನೆಗಳನ್ನು ಜನತೆಯಲ್ಲಿ ಮನದಟ್ಟು ಮಾಡಿಕೊಟ್ಟದ್ದರು. ಇದರಿಂದ ಕ್ಷೇತ್ರದ ಮತದಾರರು ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಹೆಚ್ಚಿನ ಮತ ನೀಡುವುದರೊಂದಿಗೆ ಆರಿಸಿ ತಂದಿದ್ದು, ಇಲ್ಲಿ ಶಾಸಕ ಮಾಲಕರೆಡ್ಡಿಯವರು ಗೆಲವು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಯುವ ಅಧ್ಯಕ್ಷ ರಾಘವೇಂದ್ರ ಮಾನಸಗಲ್ ಮಾತವಾಡಿದರು. ಮುಖಂಡರಾದ ಸುರೇಶ ಜೈನ, ರವಿ ಮಾಲಿಪಾಟೀಲ, ರಘುನಾಥರೆಡ್ಡಿ ಹಾಗೂ ಯುವ ಮುಖಂಡರಾದ ಶಿವರಾಜ ಜಕಾತಿ, ಸೋಮಶೇಖರ ಮಸ್ಕನಳ್ಳಿ, ರಾಹುಲ ಅರಿಕೇರಿ, ವಿಶ್ವನಾಥ ಚಿಂತನಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement