ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಶಿಕ್ಷಣದೊಂದಿಗೆ ನೈಜ ಸಂಸ್ಕೃತಿ ಅಗತ್ಯ'

Lingaraj Badiger
Updated On : 21 May 2014, 11:18 am

ಚಿತ್ತಾಪುರ: ಇಂದಿನ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣದ ಜತೆಗೆ ನೈಜ ಸಂಸ್ಕೃತಿ ಶಿಕ್ಷಣ ಅಗತ್ಯವಾಗಿದೆ ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ನುಡಿದರು. ಪಟ್ಟಣದ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಮಂಗಳವಾರ ಹಮ್ಮಿಕೊಂಡ ಸತ್ಯ ಚರಿತೆ ರಚನೆಯಲ್ಲಿ ವಚನ ಜ್ಯೋತಿ ಯಾತ್ರೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಚನ ಅರಿತರೆ ಅನಾಚಾರ ದೂರ: ಪ್ರಪಂಚಕ್ಕೆ ಸವಾಲಾಗಿರುವ ಭಯೋತ್ಪಾದನೆ, ಭ್ರಷ್ಟಾಚಾರ, ಅಸಮಾನತೆ, ಕಂದಾಚಾರಗಳೆಂಬ ಪೆಡಂಭೂತಗಳನ್ನು ಹೊಡೆದೋಡಿಸಲು ಶರಣರ ವಚನಗಳೇ ಮಂತ್ರ ದಂಡಗಳಾಗಿವೆ ಎಂದರು.
ಚಿಂಚೋಳಿ ಕಸಾಪ ಅಧ್ಯಕ್ಷ ಸುಭಾಷ ಶೀಲವಂತ ಉಪನ್ಯಾಸ ನೀಡುತ್ತ, ಇಂದು ಜನರಲ್ಲಿ ಹೊಕ್ಕಿರುವ ನಾನಾ ರೀತಿಯ ಮೌಢ್ಯಗಳಿಗೆ ಬಸವಾದಿ ಶರಣರ ವಚನಗಳು ಪರಿಹಾರ ನೀಡುತ್ತವೆ. ಶರಣರು ಮೌಲ್ಯಗಳ ಕುರಿತು ಕೇವಲ ಮಾತನಾಡಲಿಲ್ಲ. ಬದಲಾಗಿ ಮೌಲ್ಯಗಳನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದರು ಎಂದು ಹೇಳಿದರು.
ಸಮಾಜದಲ್ಲಿ ಮಲೀನತೆ ತೊಳೆದ ಶರಣರು: ಅಕಾಡೆಮಿಯ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರು ಸತ್ಯದ ಮತ್ತು ಅದರ ಪರಿಪಾಲನೆ ಜೀವನದ ಮೂಲಕ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿನ ಮಲೀನವನ್ನು ತೊಳೆದರು. ಮೂಢನಂಬಿಕೆಗಳ ವಿರುದ್ಧ ದ್ವನಿ ಎತ್ತಿದವರು ಮೊದಲು ಬಸವಾದಿ ಶರಣರಾಗಿದ್ದರು. ಇಂದಿನ ವಿದ್ಯಾರ್ಥಿಗಳು ಕೂಡ ಶರಣರ ವಚನಗಳನ್ನು ಮನನ ಮಾಡಿಕೊಳ್ಳುವ ಮೂಲಕ ತಮ್ಮ ಜ್ಞಾನ ವಿಕಾಸ ಮಾಡಿಕೊಳ್ಳಬೇಕೆಂದರು.
ಹಿರಿಯ ಸಾಹಿತಿ ಶಿವಶಾಂತರೆಡ್ಡಿ, ವಚನ ಸಾಹಿತ್ಯ ಆಕಾಡೆಮಿಯ ಚಿತ್ತಾಪುರ ತಾಲೂಕು ಅಧ್ಯಕ್ಷ ಸಿದ್ಧಲಿಂಗ ಬಾಳಿ, ನಾಗರಾಜ ಕಾಮಾ, ಪಂಕಜಾ ಸಲಗರ, ಬಿ.ಎಂ. ಪಾಟೀಲ್ ಕಲ್ಲೂರ, ಅಮ್ಜದ್ ಹುಸೇನ್, ಗುಂಡಣ್ಣ ಡಿಗ್ಗಿ, ಮಡಿವಾಳಪ್ಪ ನಾಗರಳ್ಳಿ, ಶರಣು ಜ್ಯೋತಿ, ಮಲ್ಲಿನಾಥ ತಳವಾರ, ನಾಗರಾಜ ಹೂಗಾರ, ವೀರಸಂಗಪ್ಪ ಸುಲೇಗಾಂವ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಿಯಾಂಕಾ ಪ್ರಾರ್ಥನೆ ಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement