ಇಂದಿನಿಂದ ನಾಟಕ, ವಿಚಾರ ಸಂಕಿರಣ
ಗುಲ್ಬರ್ಗ: ಬಿರಾದರ್ ಮಿತ್ರ ಮಂಡಳಿ(ರಿ) ಕನ್ನಡ ಮತ್ತು ಸಂಸ್ಕ್ರತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಹಳ್ಳಿಖೆಡ (ಬಿ) ಚಿಕ್ಕಮಠದಲ್ಲಿ ಮೇ.24, 25 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ರವರೆಗೆ ಸಪ್ತ ನಾಟಕಗಳ ನಾಟಕೋತ್ಸವ ಹಾಗೂ ವಿಚಾರಸಂಕಿರಣ ಮತ್ತು ರಂಗಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಳ್ಳಿಖೇಡ ಚಿಕ್ಕಮಠ ಗುರು ಸಿದ್ದೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸುವರು. ಮಾತೆ ಜಾಮತಿಮಠ ಕಾವೇರಮ್ಮ ಜ್ಯೋತಿ ಬೆಳಗುವರು. ಗುಲ್ಬರ್ಗ ಜಿಲ್ಲೆಯ ಮುಲ್ಲಾಮಾರಿ ತೀರಕ್ಷೇತ್ರ, ಸೊಂತ ಗ್ರಾಮದ ಅಭಿನವ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜ ಅಧ್ಯಕ್ಷತೆ ವಹಿಸುವರು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.