ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜವಾಹರ ನವೋದಯ ಪರೀಕ್ಷೆಯಲ್ಲಿ ಕಿರಣಕುಮಾರ ಸಾಧನೆ

Rashmi Kasaragodu
Updated On : 24 May 2014, 11:29 am

ಸೈದಾಪುರ: ಇಲ್ಲಿಗೆ ಸಮೀಪದ ಪಗಲಾಪೂರ ಗ್ರಾಮದ ಗುಲ್ಬರ್ಗ ಕೊರವಾರ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ ಕಿರಣಕುಮಾರ ಕಾಂತಯ್ಯ ಪಗಲಾಪೂರ ಇತ್ತೀಚೆಗೆ ನಡೆದ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಕನ್ನಡ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜ ವಿಜ್ಞಾನದ ನಾಲ್ಕು ವಿಷಯಗಳಲ್ಲಿ 100ಕ್ಕೆ 100ಅಂಕಗಳನ್ನು ಪಡೆದು ಶೇ. 98 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಗ್ರಾಮೀಣ ಭಾಗದ ವಿದ್ಯಾರ್ಥಿಯ ಈ ಸಾಧನೆಗೆ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ, ಇಸಿಒ ಶಂಕರಲಿಂಗಪ್ಪ, ಶಿಕ್ಷಕ ಸಂಘದ ಪ್ರತಿನಿಧಿ ರಾಘವೇಂದ್ರ, ಶಿಕ್ಷಕರು ಹಾಗೂ ಪೋಷಕರು, ಗಾಮಸ್ಥರು ಅಭಿನಂದಿಸಿದ್ದಾರೆ.


ಅಧಿಕಾರಿಗಳ ಅನುಪಸ್ಥಿತಿ ವಿರುದ್ಧ ವಿನೂತನ ಪ್ರತಿಭಟನೆ


ಅಫಜಲ್ಪುರ: ಪಟ್ಟಣದ ತಾಲ್ಲೂಕ ಪಂಚಾಯತಿ ಕಚೇರಿಯಲ್ಲಿ ಸುಮಾರು 10 ದಿನಗಳಿಂದ ಅಧಿಕಾರಿಗಳಿಲ್ಲದೆ ಸಂಪೂರ್ಣ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಖಂಡಿಸಿ ಜೈಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕ ಅಧ್ಯಕ್ಷ ಸುರೇಶ ಅವಟೆ ನೇತೃತ್ವದಲ್ಲಿ ತಾಪಂ ಕಚೇರಿ ಆವರಣದಲ್ಲಿ ಗೋಲಿ ಆಡುವುದರ ಮೂಲಕ ಪ್ರತಿಭಟಿಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಯನಿರ್ವಾಹಕ ಅಧಿಕಾರಿ, ವ್ಯವಸ್ಥಾಪಕರು ಹಾಗೂ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಾಪತ್ತೆ ಆಗಿರುವುದರಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳು ತಲೆದೋರಿದ್ದು ಇದನ್ನು ಸರಿಪಡಿಸುವವರು ಇಲ್ಲದಂತಾಗಿದೆ ಎಂದು ದೂರಿದರು.
ಮೀಟಿಂಗಿಗೆ ಹೋಗಿದ್ದಾರೆ: ಸಾರ್ವಜನಿಕರು ಅಧಿಕಾರಿಗಳನ್ನು ಹುಡುಕಿಕೊಂಡು ತಾಪಂಗೆ ಬಂದರೆ ಅಲ್ಲಿಯ ಸಿಬ್ಬಂದಿಯಿಂದ ಬರುವ ಸಾಮಾನ್ಯ ಉತ್ತರ ಸಾಹೇಬರು ಮೀಟಿಂಗಿಗೆ ಹೋಗಿದ್ದಾರೆ. ನಾಳೆ ಬಾ ಎನ್ನುವುದಾಗಿರುತ್ತದೆ. ಪ್ರತಿನಿತ್ಯ ಅದೆಂತಹ ಮಿಟಿಂಗ್ ಇರುತ್ತದೆ ಎಂದು ಪ್ರಶ್ನಿಸಿದರು. ಇಷ್ಟೆಲ್ಲ ನಡೆಯುತ್ತಿದ್ದರೂ ಮೇಲಧಿಕಾರಿಗಳಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ತಕ್ಷಣ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಮಹಾಂತೇಷ ಗುಣಾರಿ, ಶಿವಾನಂದ ಸಲಗರ, ಮಹೇಶ ಲೋಖಂಡೆ, ಹಾಜಿ ಮಲಂಗ್ ಮೋರಟಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement