ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಿತ ಬಳಕೆ ಮಾಡಿದ್ರೆ ಎಲ್ಲ ಕಾಲದಲ್ಲಿ ನೀರು

Rashmi Kasaragodu
Updated On : 24 May 2014, 11:29 am

ಕನ್ನಡಪ್ರಭ ವಾರ್ತೆ  ಹುಣಸಗಿ  ಮೇ 23
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೆಬ್ಬಾಗಿಲು ಅಂದರೆ ಸುರಪುರ ತಾಲೂಕು. ಇಲ್ಲಿಯ ಕಾಲುವೆ ಜಾಲ ಭದ್ರವಾಗಿದ್ದರೆ ಮಾತ್ರ ನಾಲ್ಕು ಜಿಲ್ಲೆಗಳು ನೆಮ್ಮದಿಯ ಕೃಷಿ ನಡೆಸಲು ಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರದ ಅನುದಾನದ ಸದ್ಬಳಕೆ ಜತೆಗೆ ರೈತರ ಆರ್ಥಿಕ ಸ್ಥಿತಿ-ಗತಿ ಮತ್ತು ದೇಶದ ಅಹಾರ ಭದ್ರತೆಗೆ ಅಧಿಕಾರಿಗಳ ಕೊಡುಗೆ ಅಪಾರ. ಆದ ಕಾರಣ ತೀವ್ರ ಕಾಳಜಿಯಿಂದ ಕಾಲುವೆ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ನಿರ್ವಹಿಸಿ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಳೆದ 2-3 ವರ್ಷಗಳಿಂದ ಎರಡನೆಯ ಬೆಳೆಗೆ ಸರಿಯಾದ ನೀರು ದೊರೆಯದಿದ್ದುದು, ರೈತರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು. ಇನ್ನು ಮುಂದೆ ಹಾಗಾಗಬಾರದು. ಅವರು ಶುಕ್ರವಾರ ನಾರಾಯಣಪುರ ಎಡದಂಡೆ ನಾಲೆಯ ನವೀಕರಣ 3 ಕಿ.ಮೀ. ನಲ್ಲಿ ಕಾಲುವೆ ಕಾಮಗಾರಿ ಪರಿಶೀಲಿಸಿ ಮಾತನಾಡುತ್ತಿದ್ದರು.
ಆನ್‌ಲೈನ್ ನೀರು ವಿತರಣೆ ಜಾಲ: ಸಂದರ್ಭದಲ್ಲಿ ಆಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಎಸ್.ರಂಗರಾಮ ಅವರು ನಿಗಮವು ಕೇಂದ್ರ ಜಲ ಆಯೋಗದ ಸೂಚನೆಯಂತೆ ಆನ್‌ಲೈನ್ ಮಾದರಿ ನೀರು ವಿತರಣೆ ಜಾಲವನ್ನು ಅನುಷ್ಠಾನಕ್ಕೆ ತರುತ್ತಿದೆ. ಇನ್ನು ಮುಂದೆ ಯಾರೂ ತಮಗೆ ನಿಗದಿಪಡಿಸಿದ ನೀರು ಹೊರತುಪಡಿಸಿ ಹೆಚ್ಚಾಗಿ ಬಳಸುವಂತಿಲ್ಲ ಎಂದು ತಿಳಿಸಿದರು. ನವೀಕರಣದ ನಂತರ ನೀರಿನ ಪೋಲು ಭಾಗಶಃ ಕಡಿಮೆ ಆಗಲಿದೆ ಎಂದು ಹೇಳಿದರು.
ಪ್ರಭುಗೌಡ ಪಾಟೀಲ್, ಶಿವಣ್ಣ ಮಂಗಿಹಾಳ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement