ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆಗೈದ್ರು

Rashmi Kasaragodu
Updated On : 24 May 2014, 11:27 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 23
ಗುಲ್ಬರ್ಗ- ಸೇಡಂ ರಸ್ತೆಯಲ್ಲಿರುವ ಹೊಲವೊಂದರಲ್ಲಿ 2013ರ ಡಿ.7 ಅಥವಾ 8ರಂದು ನಡೆದಿದ್ದ ಅಮೃತ ತಂಬಾಕೆ ಎಂಬುವವರ ಬರ್ಬರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಂಧಿತರು ಜಗತ್‌ನ ಮಲ್ಲು ಅಲಿಯಾಸ್ ಮಲ್ಲಿಕಾರ್ಜುನ, ಸೇಡಂ ರಸ್ತೆ ಜಿಡಿಎ ಕಾಲೋನಿ ನಿವಾಸಿ ಆಂದ ಆಲಮೇಲಕರ್ ಹಾಗೂ ಜಯನಗರ ನಿವಾಸಿ ಶಿವಕುಮಾರ ಅಲಿಯಾಸ್ ಶಿವು ಕಂಟಿಗೋಳ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಲಕ್ಕೆ ಕರೆದೊಯ್ದು ಕೊಚ್ಚಿ ಹಾಕಿದ್ರು: ಈ ಮೂವರು ಕೊಲೆಯಾದ ಅಮೃತ ತಂಬಾಕೆ ಬಳಿ ಇಸ್ಪೀಟ್ ಆಡಲು 50 ಸಾವಿರ ಸಾಲ ಪಡೆದಿದ್ದರು. ಮರಳಿ ಕೇಳಿದ್ದಕ್ಕೆ ಆರೋಪಿಗಳೆಲ್ಲ ಸೇರಿ 'ನಿನಗೆ ಹಣ ಕೊಡುತ್ತೇವೆ, ನಮ್ಮ ಸಂಗಡ ಬಾ' ಎಂದು ತಮ್ಮ ಬೈಕ್‌ಗಳ ಮೇಲೆ ಅಮೃತನನ್ನು ಸೇಡಂ ರಸ್ತೆಯಲ್ಲಿರುವ ಹೊಲವೊಂದಕ್ಕೆ ಕರೆದೊಯ್ದು ಅಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಆರೋಪಿಗಳಿಂದ ಎರಡು ಬೈಕ್, ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಭೇದಿಸುವಲ್ಲಿ ಹಾಗೂ ಆರೊಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ರಸ್ತೆ ಅಪಘಾತದಲ್ಲಿ ಚಾಲಕ ಸಾವು
ಗುಲ್ಬರ್ಗ- ಜೇವರ್ಗಿ ರಸ್ತೆಯಲ್ಲಿರುವ ಗೀತಾಂಜಲಿ ಫ್ಯಾಕ್ಟರಿ ಬಳಿ ಮೇ 20ರಂದು ಎರಡು ಲಾರಿಗಳ ಮಧ್ಯ ಸಂಭವಿಸಿದ್ದ ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಸೇಡಂನಿಂದ ಹೊರಟಿದ್ದ ಲಾರಿ ಚಾಲಕ ಬಾಬೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಅಪಘಾತದ ಕುರಿತಂತೆ ಸೇಡಂನ ಶಿವಕುಮಾರ ನಾಡೇಪಲ್ಲಿ ದೂರು ಸಲ್ಲಿಸಿದ್ದಾರೆ. ಶಿವಕುಮಾರ್ ಈತ ಲಾರಿ ಅಪಘಾತಕ್ಕೊಳಗಾದ ದಿನವೇ ಆ ಲಾರಿಯ ಕ್ಲೀನರ್ ಹುದ್ದೆಗೆ ಸೇರಿಕೊಂಡಿದ್ದರು. ಜೇವರ್ಗಿ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಇವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಷದ ಹೆಣ್ಣು ಮಗು ಕಾಣೆ: ಒಂದು ವರ್ಷದ ಮಗು ಆಟವಾಡುತ್ತಿದ್ದಾಗಲೇ ಕಾಣೆಯಾದ ಪ್ರಕರಣ ಫಿರೋಜಾಬಾದ್‌ನಲ್ಲಿ ನಡೆದಿದೆ. ಶಮಷಾದ್ ಆಲಂ ಹಾಗೂ ತರನೂ ಆರಾ ಇವರ ಮಗಳಾಗಿದ್ದ ಸಾದಿಯಾ ಆಯಾತ್ ಕಾಣೆಯಾಗಿರುವ ಮಗು. ಸಂಜೆ 4.30 ರ ಹೊತ್ತಿಗೆ ಮಗು ಮನೆಯ ಮುಂದೆಯೇ ಆಟವಾಡುತ್ತಿತ್ತು. ನಂತರ 10-20 ನಿಮಿಷದಲ್ಲಿ ನಾಪತ್ತೆಯಾಗಿದೆ ಎಂದಿರುವ ಶಮಷಾದ್ ಫರತಾಬಾದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇಡೀ ರಾತ್ರಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಿದರೂ ಮಗು ದೊರಕಿಲ್ಲ ಎಂದು ದೂರಿನಲ್ಲಿ ಶಮಷಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement