ನೂತನ ಪದಾಧಿಕಾರಿಗಳ ಆಯ್ಕೆ
ಗುಲ್ಬರ್ಗ: ಇಲ್ಲಿನ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ವತಿಯಿಂದ ನೃಪತುಂಗ ಸಂಶೋಧನಾ ವಸತಿ ನಿಲಯದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮನೋವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನಿಲಕುಮಾರ ಎಲ್.ಟೆಂಗಳಿ ಅಧ್ಯಕ್ಷ, ಆಂಗ್ಲ ವಿಭಾಗದ ಜಯ ಪ್ರಕಾಶ ಭಾವಿಮನಿ ಉಪಾಧ್ಯಕ್ಷ, ಲೋಕೇಶ ಯಾತನೂರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರೆಂದು ಮಾಜಿ ಅಧ್ಯಕ್ಷ ಚಿದಾನಂದ ಸಿಂಧೆ ತಿಳಿಸಿದ್ದಾರೆ. ಮಹೇಂದ್ರ ಪಟ್ಟಣಕರ್, ಅರುಣ ಕುರನೆ, ಶೇಖರ ಇದ್ದರು.