ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಷ್ಣು ಸಹಸ್ರನಾಮ ಪಾರಾಯಣ

Rashmi Kasaragodu
Updated On : 26 May 2014, 11:45 am

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 25
ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಾಲೋನಿ, ಓಝಾ ಲೇಔಟ್ ಬಡಾವಣೆಯಲ್ಲಿರುವ ಹಂಸಾಮಕ ಪಾರಾಯಣ ಸಂಘದಿಂದ ಯಶಸ್ವಿ 9ನೇ ವಿಷ್ಣುಸಹಸ್ರನಾಮ ಪಾರಾಯಣ ಗಿರಿಧರ ಯಲಿಕೇರಿ ಇವರ ಮನೆಯಲ್ಲಿ ಭಾನುವಾರ ನಡೆಯಿತು.
ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ನವಲಿ, ನಾರಾಯಣಾಚಾರ್ಯ ಓಂಕಾರ, ಸಂಘದ ಗೌರವಾಧ್ಯಕ್ಷರಾದ ಗಣಪತರಾವ, ಬಡಾವಣೆಯ ಪ್ರಮುಖರಾದ ಪದ್ಮನಾಭಾಚಾಯಂ ಜೋಷಿ, ಸತೀಶಚಂದ್ರ ಆಲಗುಡಕರ್. ದಂಡಾಪುರಕರ್, ಮಾಣಿಕರಾವ ಕುಲ್ಕರ್ಣಿ, ನರೇಂದ್ರ ಫಿರೋಜಾಬಾದ್, ವೆಂಕಟೇಶ ಬಬಲಾದಕರ್, ರಂಗರಾವ ಕುಲ್ಕರ್ಣಿ, ನರಿಬೋಳಿ ಜಯತೀರ್ಥ ಮತ್ತಿತರರು ಭಾಗವಹಿಸಿದ್ದರು.
ಸ್ತುತಿಗಳ ಪಾರಾಯಣ: ನಾರಾಯಣಾಚಾರ್ಯ ಓಂಕಾರ ವಾಯುಸ್ತುತಿ, ಜಯತೀರ್ಥ ಸ್ತುತಿಗಳನ್ನು ಎಲ್ಲರಿಗೂ ಹೇಳಿಕೊಟ್ಟರು. ಜೂನ್ 17ಕ್ಕೆ ಗುಲ್ಬರ್ಗಕ್ಕೆ ಉತ್ತರಾದಿ ಮಟಾಧೀಶ ಸತ್ಯಾತ್ಮತೀರ್ಥರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳೆಲ್ಲರೂ ಸೇರಿಕೊಂಡು ಶ್ರೀಗಳನ್ನು ಭೇಟಿ ಮಾಡುವುದು ಹಾಗೂ ಆರ್‌ಟಿ ನಗರದಲ್ಲಿರುವ ಮಠದ ಸ್ಥಳದಲ್ಲಿ ಧಾರ್ಮಿಕ ಕಾರ್ಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಶ್ರೀಗಳ ಗಮನ ಸೆಳೆಯಬೇಕು ಎಂಬ ಬಗ್ಗೆಯೂ ಅರವಿಂದ ನವಲಿ ಆದಿಯಾಗಿ ಎಲ್ಲರೂ ಚರ್ಚಿಸಿದರು. ಮಣ್ಣೂರು ಹಾಗೂ ಬಲಭೀಸೇನ ದೇವರ ಕ್ಷೇತ್ರ ನೆಲೋಗಿಗೆ ಹೋಗಿ ಪಾರಾಯಣ ನೆರವೇರಿಸುವ ವಿಷಯವಾಗಿಯೂ ಸಂಘದ ಸದಸ್ಯರು ಚರ್ಚಿಸಿದರು.
ಉಪಯುಕ್ತ ಮಾಹಿತಿ: ಏಕಾದಶಿ ದಿನದ ಪಾರಾಯಣವಾದ್ದರಿಂದ ಅಫಜಲ್ಪುರ ತಾಲೂಕಿನಲ್ಲಿರುವ ಭೀಮಾತೀರದ ತೀರ್ಥಕ್ಷೇತ್ರ ಮಣ್ಣೂರಿನಲ್ಲಿ ವೃಂದಾವನಸ್ಥರಾಗಿರುವ ಅಪರೋಕ್ಷ ಜ್ಞಾನಿ ವೇದೇಶತೀರ್ಥರ ಜೀವನ ವೃತ್ತಾಂತ, ಅವರ ಕೃತಿಗಳ ಕುರಿತಂತೆ ಸಂಘದ ಸದಸ್ಯರಿಗೆ ಉಪಯುಕ್ತ ಮಾಹಿತಿ ನೀಡಲಾಯ್ತು.
ಸಂಘದ 10ನೇ ಪಾರಾಯಣ ಆರ್‌ಟಿ ನಗರದಲ್ಲಿರುವ ಗಣಪತರಾವ್‌ರ ಮನೆಯಲ್ಲಿ ಜೂ. 1ರಂದು ಬೆ.7.30 ಕ್ಕೆ ನಡೆಯಲಿದೆ ಎಂದು ಸತೀಶಚಂದ್ರ ಹಾಗೂ ಪದ್ಮನಾಭಾಚಾರ್ಯ ತಿಳಿಸಿದ್ದಾರೆ.


ಚಂದ್ರಶೇಖರ ಪಿಜಿ ಕೇಂದ್ರಕ್ಕೆ ಶೇ.96
ಯಾದಗಿರಿ: 2013- 14ನೇ ಸಾಲಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾನಿಲಯವು ನಡೆಸಿದ ಎಂಎ ಇತಿಹಾಸ ಪ್ರಥಮ ಸೆಮಿಸ್ಟರ್‌ನ ಪರೀಕ್ಷೆಯಲ್ಲಿ ಚಂದ್ರಶೇಖರ ಸ್ನಾತಕೋತ್ತರ ಕೇಂದ್ರಕ್ಕೆ ಶೇ.96ರಷ್ಟು ಬಂದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ರುದ್ರಗೌಡ ನಾಡಗೌಡ, ಕಾರ್ಯದರ್ಶಿಯಾದ ಸಿದ್ರಾಮಪ್ಪಗೌಡ ಚೇಗುಂಟಾ, ಆಡಳಿತಾಧಿಕಾರಿ ರಘುನಾಥರಡ್ಡಿ ಪಾಟೀಲ್, ಪ್ರಾಂಶುಪಾಲ ಕೊನೆಮನಿ ಹಾಗೂ ವೆಂಕಟರಾವ ಕುಲಕರ್ಣಿ ಸಿಬ್ಬಂದಿ ಅಭಿನಂದಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement