ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾಧಿಕಾರಿ ಕಚೇರಿಗೆ ಬೀಗ; ಎಚ್ಚರಿಕೆ

Vishwanath S
Updated On : 28 May 2014, 12:00 pm

ಕನ್ನಡಪ್ರಭ ವಾರ್ತೆ  ಆಳಂದ  ಮೇ 27
ಕಬ್ಬಿನ ಬಿಲ್ ಪಾವತಿ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
  ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಆಡಳಿತ ಮಂಡಳಿಯ ಪ್ರಮುಖರು ಭೇಟಿ ನೀಡಿ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಕಚೇರಿ ಮತ್ತು ಕಾರ್ಖಾನೆಯ ಗೇಟಿಗೆ ಬೀಗ ಹಾಕಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಆರ್ ಪಾಟೀಲ್, ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಹಣ ದೊರೆಯದೆ ಸಂಕಷ್ಟದಲ್ಲಿದ್ದಾರೆ. ಹಲವು ಬಾರಿ ಬಿಲ್ ಪಾವತಿಗೆ ಜಿಲ್ಲಾಧಿಕಾರಿಗಳಿಗೆ, ಸಕ್ಕರೆ ಆಯುಕ್ತರಿಗೆ ಕಾರ್ಖಾನೆ ಆಡಳಿತ ಮಂಡಳಿಗೆ ಒತ್ತಾಯಿಸಿ ಸೂಚನೆ ನೀಡಿದ ಮೇಲೂ ಕ್ರಮ ಕೈಗೊಂಡಿಲ್ಲ. ಕಬ್ಬಿನ ಬಿಲ್ ಬಡ್ಡಿ ಸಮೇತ ಪೂರೈಸಲು ಒತ್ತಾಯಿಸಿದರು.
ಡಿಸಿ ಕಚೇರಿಗೆ ಬೀಗ- ಎಚ್ಚರಿಕೆ: ರೈತರ ಹಿತ ಕಾಯದ ಕಾರ್ಖಾನೆ ವಿರುದ್ಧ ಕ್ರಮ ಕೈಗೊಂಡು, ಕಾರ್ಖಾನೆಗೆ ನೀಡಿದ ಗುತ್ತಿಗೆಯನ್ನು ರದ್ದುಪಡಿಸಬೇಕು. ಆಡಳಿತ ಮಂಡಳಿಯು ಲಿಖಿತ ಭರವಸೆ ಕೊಟ್ಟಂತೆ ರೈತರೊಂದಿಗೆ ನಡೆದುಕೊಂಡಿಲ್ಲ ಎಂದು ಪತ್ರವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ತಕ್ಷಣ ಬಿಲ್ ನೀಡದೆ ಹೋದಲ್ಲಿ ಡಿಸಿ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ನೀವು ಭಿಕ್ಷೆ ನೀಡುತ್ತಿಲ್ಲ..: ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ ಕೋರಳ್ಳಿ, ಶರಣು ಪಾಟೀಲ, ಬಿ.ವಿ.ಚಕ್ರವರ್ತಿ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಕಲ್ಯಾಣರಾವ್ ಪಾಟೀಲ ಭೂಸನೂರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾವು ಮಾತನಾಡಿ, ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣ್ಣವಾಗಿ ರೈತ ವಿರೋಧಿ ಚಟುವಟಿಕೆ ನಡೆಸಿದೆ. ಕಾರ್ಖಾನೆಗೆ ಕಬ್ಬು ಪೂರೈಸಿದ ಕಬ್ಬಿನ ಬಿಲ್ ನಮ್ಮ ಹಕ್ಕಾಗಿದೆ. ಇದೇನು ಭಿಕ್ಷೆ ಅಲ್ಲ. ಕೂಡಲೇ ಬಿಲ್ ಪಾವತಿಸದಿದ್ದರೆ ಉಗ್ರ ಪ್ರತಿಭಟನೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಆಡಳಿತ ಪರ ಕಬ್ಬು ವಿಭಾಗದ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ ಕುಲಕರ್ಣಿ ಆಗಮಿಸಿದರು. ಇದನ್ನು ಕಂಡು ರೊಚ್ಚಿಗೆದ್ದ ಪ್ರತಿಭಟನಾಕಾರರು ಹಿರಿಯ ಅಧಿಕಾಗಳು ಏಕೆ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.  ಜಿಪಂ ಸದಸ್ಯೆ ಮಂಗಲಾ ನರೋಣಿ, ಬಿ.ಕೆ.ಪಾಟೀಲ, ಮಲ್ಲೇಶಪ್ಪಾ ಬಿರಾದಾರ, ಕಲ್ಯಾಣಿ ಜಮಾದಾರ ಭೂಸನೂರ, ರೇವಣಿಸಿದ್ಧ ಪಟ್ನೆ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಸದಸ್ಯ ಶಿವಪುತ್ರ ಕೊಟ್ಟರಗಿ, ಚಂದ್ರಕಾಥ ಭೂಸನೂರ, ಗುರುನಾಥ ಗೌರಸೆ, ಎಸ್.ಎಂ. ದುಲಂಗೆ, ಪುರಸಭೆ ಸದಸ್ಯ ಮಲ್ಲಪ್ಪಾ ಹತ್ತರಕಿ ಸೇರಿದಂತೆ ಅನೇಕ ಗ್ರಾಮಗಳ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು. ತಹಸೀಲ್ದಾರ ಬಸವರಾಜ ಅಂಬರಶೆಟ್ಟಿ  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement