ರವೀಂದ್ರನಾಥ ಮೇಲಿನ ಆರೋಪ ಸತ್ಯಕ್ಕೆ ದೂರ: ಬಿಎಸ್ಪಿ
ಗುಲ್ಬರ್ಗ: ಎಡಿಜಿಪಿ ಡಾ. ಪಿ. ರವೀಂದ್ರನಾಥ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಸೂಕ್ತ ತನಿಖೆ ನಡೆಸಿ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಮಾಡಿದೆ.
ಮಫ್ತಿಯಲ್ಲಿದ್ದ ಮೀಸಲು ಪಡೆಯ ಎಡಿಜಿಪಿ ಡಾ. ಪಿ. ರವೀಂದ್ರನಾಥ ಬೆಂಗಳೂರಿನ ಕನ್ನಿಂಗ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಹೌಸ್ನಲ್ಲಿ ಯುವತಿಯರ ಭಾವಚಿತ್ರ ತೆಗೆದಿದ್ದಾರೆಂದು ಬಂಧಿಸಿ ಲಾಕಪ್ನಲ್ಲಿ ಕೂಡಿಸಿ ಮನಬಂದಂತೆ ಥಳಿಸಿರುವುದು ಪಕ್ಷ ಖಂಡಿಸಿದೆ.
ಇಲಾಖೆಯಲ್ಲಿ ಡಾ. ರವೀಂದ್ರನಾಥ ಅವರಿಗೆ ಆಗದ ಕೆಲವು ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ಘಟನೆ ನಡೆದಿರುವುದು ಕಂಡು ಬರುತ್ತದೆ. ಈ ಮೊದಲು ಇವರ ಮೇಲೆ ಸುಳ್ಳು ಆರೋಪ ಮಾಡಿ ಆರೋಪಿತರ ಬಣ್ಣ ಬಯಲಾಗಿತ್ತು. ಇವರು ದಲಿತರೆನ್ನುವ ಕಾರಣಕ್ಕಾಗಿಯೇ ಮೇಲ್ಜಾತಿಯ ಹಿರಿಯ ಅಧಿಕಾರಿಗಳು ಈ ರೀತಿ ಸಂಚು ರೂಪಿಸುತ್ತಿರುವುದು ತಿಳಿಯುತ್ತದೆ ಎಂದಿದೆ.