ಗ್ರಾಪಂ ಚುನಾವಣೆ: ಮತದಾನ
ಟೇಕಲ್: ಟೇಕಲ್ನ ಕೊಂಡಶೆಟ್ಟಹಳ್ಳಿ ಗ್ರಾ.ಪಂ.ನಲ್ಲಿ ತೆರವಾಗಿದ್ದ ನಕ್ಕನಹಳ್ಳಿ ಗ್ರಾ.ಪಂ. ಕ್ಷೇತ್ರ, ಕುಂಟನಹಳ್ಳಿ ಗ್ರಾ.ಪಂ. ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆದು ಒಟ್ಟಾರೆ ಶೇ.70 ರಷ್ಟು ಜನ ಮತ ಚಲಾಯಿಸಿದರು.
ನಕ್ಕನಹಳ್ಳಿ, ಕಾರಂಗುಟ್ಟೆ, ಚಿನಪಗಾನಹಳ್ಳಿ ಹಾಗೂ ಕುಂಟನಹಳ್ಳಿಗಳಲ್ಲಿ ಮತದಾನ ಕೇಂದ್ರಗಳಲ್ಲಿ ಬೆಳಿಗಿನಿಂದಲೆ ಜನ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಎಲ್ಲಾ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.