ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲವೃದ್ಧಿ: ಮಂಜುನಾಥಗೌಡ
ಟೇಕಲ್: ಅಂತರ್ಜಲ ಮಟ್ಟ ವೃದ್ಧಿಸಲು ಹಾಗೂ ರೈತರಿಗೆ ಬೆಳೆ ಬೆಳೆಯಲು ಸಹಕಾರಿ ಆಗಲೆಂದು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ ಎಂದು ಶಾಸಕ ಮಂಜುನಾಥಗೌಡ ತಿಳಿಸಿದರು.
ಇಲ್ಲಿನ ಕೆ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪಟಾಲಮ್ಮನ ಗುಡಿ ರಸ್ತೆ ಪಕ್ಕದಲ್ಲಿ ಸಣ್ಣ ನೀರಾವರಿ ಇಲಾಖೆಯ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದ ಅವರು, ಅಂದಾಜಿನ ಪ್ರಕಾರ ಈ ಚೆಕ್ ಡ್ಯಾಂಗೆ 29 ಲಕ್ಷ ಖರ್ಚಾಗಲಿದೆ. ಗುಣಮಟ್ಟದ ಕೆಲಸ ಮಾಡಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು.
ಮಾಜಿ ತಾ.ಪಂ. ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ, ಬಲ್ಲೇರಿ, ಜಂಗಾನಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಅಂತರ್ಜಲಮಟ್ಟ ವೃದ್ಧಿಸಲು ಇದು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭ ಗುತ್ತಿಗೆದಾರ ಗುಟ್ಟೂರು ಪಿ.ನಂಜಪ್ಪ, ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ರಾಮಮೂರ್ತಿ, ಬನಹಳ್ಳಿ ಗ್ರಾ.ಪಂ.ನ ಅಧ್ಯಕ್ಷ ರಾಮಕೃಷ್ಣಪ್ಪ, ಮಾದಾಪುರ ಶ್ಯಾಮಣ್ಣ, ಬಿ.ಜಿ. ಮುನಿಶಾಮಿಗೌಡ, ಕ್ಷೇತ್ರನಹಳ್ಳಿ ವೆಂಕಟೇಶ್, ಬನಹಳ್ಳಿ ಬಿ.ಸತೀಶ್, ಲಕ್ಷ್ಮಣ್ ಗೌಡ, ಮುನಿರಾಜು ಉಪಸ್ಥಿತರಿದ್ದರು.