ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ

Rashmi Kasaragodu
Updated On : 6 Aug 2013, 1:19 am

ಮುಳಬಾಗಲು:  ಇಲ್ಲಿನ ತಾ.ಪಂ. ಅಧ್ಯಕ್ಷೆ ಚಿನ್ನಕ್ಕ ಹಾಗೂ ಉಪಾಧ್ಯಕ್ಷ ರಾಜುಗೌಡರ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ನಿರ್ಣಯ ಗೆಲುವು ಸಾಧಿಸಿತು. ತಾ.ಪಂ. ಸದಸ್ಯ ಪಿ.ವಿ. ಶಿವರಾಮರೆಡ್ಡಿ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಸಭೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ 19 ಮಂದಿ ಸದಸ್ಯರ ಸಭೆಯಲ್ಲಿ 14 ಮಂದಿ ಅವಿಶ್ವಾಸ ನಿರ್ಣಯಕ್ಕೆ ಕೈ ಎತ್ತುವ ಮೂಲಕ ಅವರನ್ನು ಪದಚ್ಯುತಿಗೊಳಿಸಿದರು. ಸಭೆಗೆ 5 ಮಂದಿ ಸದಸ್ಯರು ಗೈರು ಹಾಜರಾಗಿದ್ದರು. ತಾ.ಪಂ. ಸದಸ್ಯರಾದ ತ್ರಿವೇಣಮ್ಮ, ಅರ್ಚನ, ವಿಜಯಲಕ್ಷ್ಮಿ ಚಂದ್ರೇಗೌಡ, ನಾಗರತ್ನಮ್ಮ, ರಾಜಪ್ಪ, ಬೈರಪ್ಪ, ಶ್ರೀರಾಮಪ್ಪ, ವೆಂಕಟರಾಮಪ್ಪ, ಲಕ್ಷ್ಮೀದೇವಮ್ಮ, ಸುಬ್ಬಮ್ಮ, ಸರೋಜ, ಕಾಂತಮ್ಮ, ಶ್ರೀರಾಮರೆಡ್ಡಿ ಹಾಜರಿದ್ದರು. ತಾ.ಪಂ. ಅಧ್ಯಕ್ಷೆ ಚಿನ್ನಕ್ಕ. ಉಪಾಧ್ಯಕ್ಷ ರಾಜುಗೌಡ, ಶ್ರೀನಿವಾಸರೆಡ್ಡಿ, ಸುಧಾ, ಕೆ.ಎಸ್.ಶ್ರೀನಿವಾಸ್ ಸಭೆಗೆ ಬಾರದೆ ಗೈರುಹಾಜರಾಗಿದ್ದರು. ತಾ.ಪಂ. ಅಧಿಕಾರಿ ಡಾ.ರಮಾನಂದ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement