ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣೆಗೆ ಚಾಲನೆ
ಕ.ಪ್ರ.ವಾರ್ತ್ಣೆ ಮುಳಬಾಗಲ್ಣು ಆ.5
ತಾಲೂಕಿನ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸಿ ಪ್ರತಿ ಗ್ರಾಮದಲ್ಲೂ 50 ರಿಂದ 80 ಯುವಕರು ಸದಸ್ಯತ್ವ ಪಡೆಯಲು ಶ್ರಮಿಸಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋಲಾರ ಲೋಕಸಭೆ ಕಾಂಗ್ರೆಸ್ ಪಕ್ಷದ ಚುನಾವಣಾಧಿಕಾರಿಗಳಾಗಿ ಹೈದರಾಬಾದ್ ಗದೀಶ್ ನೇಮಕ ಆಗಿರುವುದು ಶ್ಲಾಘನೀಯ. ಅವರ ಸಮ್ಮುಖ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಕೋಲಾರ ಜಿಲ್ಲೆಯಲ್ಲಿ ಮುಳಬಾಗಲು ತಾಲೂಕಿನಲ್ಲಿ ಹೆಚ್ಚಿನ ಸದಸ್ಯತ್ವ ಪಡೆಯಲು ಶ್ರಮಿಸಬೇಕು. ತಾವು ಇದಕ್ಕಾಗಿ ಸಂಪೂರ್ಣ ಸಹಕಾರವಿದೆ ಸದಸ್ಯತ್ವ ನೋಂದಣಿ ನಂತರ ತಾಲೂಕುಮಟ್ಟದ ಬೃಹತ್ ಯುವ ಕಾಂಗ್ರೆಸ್ ಸಮಾವೇಶ ನಡೆಸಲಾಗುವುದು ಎಂದರು.
ತಾಲೂಕು ಆವಣಿ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಜಿ ಮಾತನಾಡಿ, ಹಿಂದಿನ ಕಾಂಗ್ರೆಸ್ ಶಾಸಕ ಅಮರೇಶ್ ಅವಧಿಯಲ್ಲಿ ಪಕ್ಷ ಅಧೋಗತಿಗೆ ಬಂದಿದೆ. ಪಕ್ಷಕ್ಕೆ ಠೇವಣೆ ಸಹ ಇಲ್ಲದ ಘನತೆ ಅವರದಾಗಿದೆ, ಆದರೆ, ಹಾಲಿ ಶಾಸಕ ಕೊತ್ತೂರು ಮಂಜುನಾಥ್ ಪಕ್ಷವನ್ನು ಬಲಗೊಳಿಸಲು ಶ್ರಮಿಸುತ್ತಿದ್ದಾರೆ. ಶ್ರಾವಣ ಮಾಸದ ಬಳಿಕ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕೊತ್ತೂರು ಮಂಜುನಾಥ್ ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಪಕ್ಷವನ್ನು ಬಲಗೊಳಿಸುವರು ಎಂದರು.
ಕೋಲಾರ ಲೋಕಸಭೆ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಹೈದರಾಬಾದ್ ಜಗದೀಶ್ ಮಾತನಾಡಿ, ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಮೊದಲಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ ಚಾಲನೆ ನೀಡುವರು. ಸದಸ್ಯತ್ವ ನೋಂದಣಿ ಅಭಿಯಾನ ಆ.30 ರಿಂದ ಪ್ರಾರಂಭವಾಗಿ ಸೆ.5ಕ್ಕೆ ಮುಗಿಯುತ್ತದೆ. ಜು. 1978 ರಿಂದ ಸೆ.5ನೇ 1995ಕ್ಕೆ 35 ವರ್ಷ ಆರು ತಿಂಗಳು ಒಳಗೆ ಇರುವವರು ಮಾತ್ರ ಸದಸ್ಯತ್ವಕ್ಕೆ ಆರ್ಹರಾಗಿರುತ್ತಾರೆ ಎಂದು ಎಂದರು.
ಬ್ಲಾಕ್ ಕಾಂಗ್ರೆಸ್ ಕಸಬಾ ಅಧ್ಯಕ್ಷ ಷಹಬಾಜ್ ಖಾನ್, ತಾಲೂಕು ಭೂ ಬ್ಯಾಂಕ್ ಅಧ್ಯಕ್ಷ ನೀಲಕಂಠೇಗೌಡ, ಆರ್.ಎಸ್. ಕೃಷ್ಣಯ್ಯಶೆಟ್ಚಿ, ಆವಣಿ ನವೀನ್. ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ರಫೀಕ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಶ್ರೀನಾಥ್, ಜಿಲ್ಲಾ ಮನೋಹರ್, ಗೊಲ್ಲಹಳ್ಲಿ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.