ಶಾಟ್ ಸರ್ಕ್ಯೂಟ್: ಎಲೆಕ್ಟ್ರಿಕಲ್ ವಸ್ತು ಭಸ್ಮ
ಕೆಜಿಎಫ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಗೋಡೌನ್ನಲ್ಲಿದ್ದ ಎಲೆಕ್ಟ್ರಿಕಲ್ ಉಪರಣಗಳಿಗೆ ಬೆಂಕಿಬಿದ್ದು ಸುಟ್ಟು ಹೋದ ಘಟನೆ ನಗರದಲ್ಲಿ ನಡೆದಿದೆ.
ರಾಬಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ್ನಗರ ರಸ್ತೆ ನಿವಾಸಿ ಶಾಂತಿಲಾಲ್ ಎಂಬವರ ಡಿವಿಡಿ ಪ್ಲೇಯರ್, ಟಿವಿ, ವಿಸಿಆರ್ ಟೇಪ್ ರೆಕಾರ್ಡ್ ಮುಂತಾದ ಎಲೆಕ್ಟ್ರಿಕಲ್ ಸ್ಕ್ರಾಪ್ ವಸ್ತುಗಳನ್ನು ಗೋಡೌನ್ನಲ್ಲಿಟ್ಟಿದ್ದರು. ಸೋಮವಾರ ಸಂಜೆ 5 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಗುಲಿ ಅವಗಢ ಸಂಭವಿಸಿದೆ. ಗೊಡೋನ್ನಿಂದ ಹೊಗೆ ಬರುತ್ತಿರುವುದನ್ನು ಪಕ್ಕದ ಅಂಗಡಿಯವರು ಗಮನಿಸಿ, ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಿದಂತಾಯಿತು.
ಸ್ಥಳಕ್ಕೆ ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.