ಅಧ್ಯಕ್ಷರಾಗಿ ಮಾಲೂರಿನ ಎಂ.ವಿ. ವೇಮನ ಆಯ್ಕೆ
ಕ.ಪ್ರ.ವಾರ್ತೆ ಮಾಲೂರು ಆ.6
ಜಿಲ್ಲಾ ಕೃಷಿ ಉತ್ಪನ್ನ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಮಾಲೂರಿನ ಎಂ.ವಿ.ವೇಮನ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಾಲೂರು ತಾಲೂಕು ಕೃಷಿ ಮಾರಾಟಗಾರರ ಸಂಘದ ವತಿಯಿಂದ ಪಟ್ಟಣದ ಪದ್ಮಾವತಿ ಸಂಕೀರ್ಣದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಕೃಷಿ ಮಾರಾಟಗಾರರು ಸಭೆ ಸೇರಿ ನಡೆಸಿದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಕೋಲಾರದ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ತಾಯಲೂರು ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿಯಾಗಿ ಕೋಲಾರದ ಸಿ.ಎಸ್.ಸತ್ಯನಾರಾಯಣ ಶೆಟ್ಟಿ ಹಾಗೂ ಬಂಗಾರಪೇಟೆಯ ಕೆ.ರಾಮಚಂದ್ರ. ಖಂಜಾಚಿಯಾಗಿ ಶ್ರೀನಿವಾಸಪುರದ ಕೋಟೇಶ್ವರ್, ಜಿಲ್ಲಾ ಸಂಚಾಲಕರಾಗಿ ಬೇತಮಂಗಲದ ಪ್ರಭಾಕರ್ ಗುಪ್ತ, ಮುಳಬಾಗಿಲಿನ ಸುರೇಶ್, ಮಾಲೂರಿನ ಮುನಿರೆಡ್ಡಿ, ಸಿ.ಪಿ.ನಾಗರಾಜ್ ಹಾಗೂ ಜಿಲ್ಲಾ ನಿದೇರ್ದಶಕರಾಗಿ ಮಾಸ್ತಿ ಮೋಹನ್, ಮುಳಬಾಗಿಲು ಗೋಪಾಲ್, ಬಂಗಾರ ಪೇಟೆಯ ಕುಮರೇಶ್, ಟೇಕಲ್ ಶ್ರೀನಿವಾಸ್, ಕೋಲಾರದ ನಾಗೇಂದ್ರ, ಶ್ರೀನಿವಾಸಪುರದ ಸುರೇಂದ್ರ ಅವರನ್ನು ನೇಮಿಸಲಾಯಿತು. ನೂತನ ಜಿಲ್ಲಾಧ್ಯಕ್ಷ ಎಂ.ವಿ.ವೇಮನ ಮಾತನಾಡಿ, ರೈತರ ಶ್ರೇಯೋಭಿವೃದ್ಧಿ ಬಯಸುವ ನಾವೂ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸರಬರಾಜು ಮಾಡುವಲ್ಲಿ ಪ್ರಾಮಾಣಿಕತೆ ಮರೆಯಲಿದ್ದೇವೆ ಎಂದರು. ಕೃಷಿ ಪರಿಕರ ಅಭಾವವಿದ್ದಲ್ಲಿ ಸರ್ಕಾರದೊಡನೆ ಚರ್ಚಿಸಿ ರೈತರಿಗೆ ಸಕಾಲದಲ್ಲಿ ದೊರೆಯುವಂತೆ ಮಾಡಲಾಗುವುದು. ನುರಿತ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ತಜ್ಞರಿಂದ ರೈತರಿಗೆ ತರಬೇತಿಗಳನ್ನು ನೀಡುವುದು, ಉತ್ತಮ ಹಾಗೂ ಸ್ವಚ್ಛ ವ್ಯಾಪಾರ ನಡೆಸಲು ಜಿಲ್ಲಾ ಮಾರಾಟಗಾರರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಜಿಲ್ಲಾ ಕೃಷಿ ಮೇಳವನ್ನು ಆಗ್ಗಾಗೆ ಆಯೋಜಿಸಲು ತೀರ್ಮಾನಿಸಿರುವ ಸಂಘವು ಜಿಲ್ಲೆಗೆ ಶಾಶ್ವತ ನೀರಾವರಿ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ರಾಜ್ಯಮಟ್ಟಕ್ಕೆ ಸುಪ್ರಿಯಾ ಆಯ್ಕೆ
ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ತಾಲೂಕಿನ ಜೆ.ತಿಮ್ಮಸಂದ್ರ ಪಂಚಾಯ್ತಿ ಆಲವಾಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಬಿ.ಎನ್. ಸುಪ್ರಿಯಾ ಇನ್ಸ್ಪೈರ್ ಅವಾರ್ಡ್ಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕ ಬಿ.ಎನ್. ಶ್ರೀನಿವಾಸರೆಡ್ಡಿ ಮಾರ್ಗದರ್ಶನದಲ್ಲಿ ಸುಪ್ರಿಯಾ ಎಲೆಕ್ಟ್ರಿಕ್ ಕಿಟ್ ತಯಾರಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.