ಕೋಲಾರ: ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ
ಕೋಲಾರ: ತಾಲೂಕಿನ ವೇಮಗಲ್ನ ಬೆಟ್ಟಹೊಸಪುರ ಗ್ರಾಮದ ಗ್ರಾಮ ದೇವತೆ ಚೌಡೇಶ್ವರಿ ಮಾತೆಯ ಜನ್ಮ ದಿನೋತ್ಸವ ನಡೆಯಿತು. ಜನ್ಮ ದಿನೋತ್ಸವದ ಪ್ರಯುಕ್ತ ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ನಂತರ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬಂದ ಭಕ್ತಾಧಿಗಳಿಗೆ ಪ್ರಸಾದ ಮತ್ತು ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತಾಧಿಗಳು ಚೌಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು.