ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೇಣು ಬಿಗಿದು ವೃದ್ಧ ಆತ್ಮಹತ್ಯೆ

Rashmi Kasaragodu
Updated On : 7 Aug 2013, 1:11 am

ಚಿಂತಾಮಣಿ: ಮರಕ್ಕೆ ನೇಣು ಬಿಗಿದು ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಗತಿ ಬಳಿ ಮಂಗಳವಾರ ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ. ತಾಲೂಕಿನ ಮುರುಗಮಲ್ಲ ರಸ್ತೆಯ ಕಾಗತಿ ಬಳಿ ಕೋಲಾರ ತಾಲೂಕಿನ ಹೂವಳ್ಳಿಯ ಬೀರಪ್ಪ (64) ಮೃತಪಟ್ಟವರು. ಪಂಚೆ ಕುತ್ತಿಗೆ ಸುತ್ತಿಕೊಂಡು ಮೃತಪಟ್ಟಿದ್ದಾರೆ. ಬೆಳಿಗ್ಗೆ ಗ್ರಾಮದಿಂದ ತನ್ನ ಮಗಳು ನೋಡಲು ಹೂವಳ್ಳಿಯಿಂದ ಬಂದಿದ್ದರು. ಯೋಗಕ್ಷೇವು ವಿಚಾರಿಸಿ ಮರಳಿ ಊರಿಗೆ ಹೊರಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಪೊಲೀಸರು ದೂರು ದಾಖಲಿಸಿದ್ದಾರೆ.
ದಂಡ ವಸೂಲಿ
ಕೋಲಾರ:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಜುಲೈನಲ್ಲಿ 3899 ಬಸ್ಸುಗಳನ್ನು ತನಿಖೆಗೆ ಒಳಪಡಿಸಿ, 880 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, 1,00,350 ದಂಡ ವಸೂಲಿ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement