ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗೆಪಾಟಲಿಗೀಡಾದ ಬಿಜೆಪಿ ಪರ-ವಿರೋಧ ಗುಂಪುಗಳು

Rashmi Kasaragodu
Updated On : 8 Aug 2013, 12:46 pm

ಕ.ಪ್ರ.ವಾರ್ತೆ ಟಿ ಚಿಂತಾಮಣಿ ಟಿ ಆ.7
ಜಿಲ್ಲಾ ಚುನಾವಣಾ ಉಸ್ತುವಾರಿ ರವೀಂದ್ರ ಸಮಕ್ಷಮದಲ್ಲೆ ಸ್ಥಳೀಯ ಬಿಜೆಪಿ ಪರ-ವಿರೋಧ 2 ಗುಂಪುಗಳು ಕಾರ್ಯಕ್ರಮವೊಂದರ ಉದ್ಘಾಟನೆಗೆ ಸಂಬಂಧಿಸಿ ಸಭೆಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ನಗೆಪಾಟಲಿಗೆ ಗುರಿಯಾಗಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ಸುವರ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಬೆಳಿಗ್ಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಹಾಗೂ ರಾಷ್ಟ್ರೀಯ ಸ್ಥಾನ ರಕ್ತನಿಧಿ ಸಹಯೋಗದೊಂದಿಗೆ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜನ್ಮದಿನ ಸಂಸ್ಮರಣೆ ಹಾಗೂ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿನ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.  ಇದಕ್ಕೆ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಉದ್ದೇಶಿಸಲಾಗಿತ್ತು.
ನಡೆದಿದ್ದೇನು?:  ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಸತ್ಯನಾರಾಯಣ ಮಹೇಶ್ ಹಾಗೂ ಬೆಂಬಲಿಗರು ಬುಧವಾರ ಬೆಳಿಗ್ಗೆ ಕಾರ್ಯಕ್ರಮಕ್ಕೆ ತರಾತುರಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ತುರ್ತು ಕಾರ್ಯದ ನಿಮಿತ್ತ ಹೊರಟರು.
ನಂತರ ಅರ್ಧ ಗಂಟೆ ತಡವಾಗಿ ಬಂದ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹಾಗೂ ಸ್ಥಳೀಯ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಳಗವಾರ ಪ್ರತಾಪ್ ಕಾರ್ಯಕ್ರಮಕ್ಕೆ ಪುನಃ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಬೇಕೆಂದು ಮುಂದಾದರು.
ಸಭೆಯಲ್ಲಿ ಜಟಾಪಟಿ:  ಇದರಿಂದ ಕೆಂಡಾಮಂಡಲರಾದ ಸತ್ಯನಾರಾಯಣ ಮಹೇಶ್ ಬೆಂಬಲಿತ ಜಿಲ್ಲಾ ಪರಿಶಿಷ್ಟ ವರ್ಗ ಮೋರ್ಚಾ ಅಧ್ಯಕ್ಷ ವೆಂಕಟರವಣ ಹಾಗೂ ಮಹೇಶ್ ಇತರರು ಸೇರಿ ವಿರೋಧ ವ್ಯಕ್ತಪಡಿಸಿ ಸಭೆಗೆ ವಿಧಾನಪರಿಷತ್ ಸದಸ್ಯರು ಹಾಗೂ ಬೆಂಬಲಿಗರನ್ನು ಆಹ್ವಾನಿಸದೆ ಇದ್ರೂ ಸಹ ಸಭೆಗೆ ಮಸಿ ಬಳಿಯಲು ಹಾಗೂ ರಾಜಕೀಯ ದುರುದ್ದೇಶದಿಂದ ಸಭೆಗೆ ಬಂದಿದ್ದೀರೆಂದು ಹಾಗೂ ಕಾರ್ಯಕ್ರಮಕ್ಕೆ ಮತ್ತೆ ಉದ್ಘಾಟನೆಗೆ ಬಿಡುವುದಿಲ್ಲ ಎಂದು ಜಿಲ್ಲಾ ಚುನಾವಣಾ ಉಸ್ತುವಾರಿ ರವೀಂದ್ರ ಸಮಕ್ಷದಲ್ಲೆ ಸ್ಥಳೀಯ ಬಿಜೆಪಿ ಪರ-ವಿರೋಧ 2 ಗುಂಪುಗಳು ಜಟಾಪಟಿ ನಡೆಯಿತು.
ಮಧ್ಯ ಪ್ರವೇಶಿಸಿದ ರವೀಂದ್ರ 2 ಗುಂಪುಗಳನ್ನು ಸಮಾಧಾನಪಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರ ಮುಖ್ಯ ಎಂದು ಮನವಿ ಮಾಡಿದ ನಂತರ 2 ಗುಂಪುಗಳು ಸುಮ್ಮನಾದರು. ನಂತರ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಬಿ.ಎನ್. ಶ್ರೀನಿವಾಸಪ್ಪ,ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾ.ಶಂಕರ್, ಮುಖಂಡರಾದ ಎನ್.ಶಿವಣ್ಣ, ಸೂರ್ಯಪ್ರಕಾಶ್, ಗೋವಿಂದರಾಜು, ಮಹೇಶ್, ಅರುಣ, ವೆಂಕಟೇಶ್, ಮಂಜುನಾಥರೆಡ್ಡಿ, ಸುರೇಶ್, ಬ್ಯಾಲಹಳ್ಳಿ ಆಂಜನೇಯರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement