ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಜಾಪ್ರಭುತ್ವ ವಿರೋಧಿ ಕೃತ್ಯದ ವಿರುದ್ಧ ಸಿಪಿಎಂ ಪ್ರತಿಭಟನೆ

Rashmi Kasaragodu
Updated On : 8 Aug 2013, 12:42 pm

ಗುಡಿಬಂಡೆ: ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿಯಿಡಿದಿರುವ ತೃಣಮೂಲ ಕಾಂಗ್ರೇಸ್ ಇತ್ತೀಚೆಗೆ ನಡೆದ ಪಂಚಾಯತಿ ಚುನಾವಣೆಗಳಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ನಡೆಸಿರುವ ದೌರ್ಜನ್ಯ ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಕ ಕೊಡುಗೆ ನೀಡಿದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ಗೂಂಡಾಗಳು ಸಿಪಿಎಂಗೆ ಸೇರಿದ ಕಾರ್ಯಕರ್ತರ ಮೇಲೆ ಎಸಗಿರುವ ದೌರ್ಜನ್ಯ ಹಾಗೂ ಕೊಲೆಗಡುಕ ಕೃತ್ಯಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಭೂ ಸುದಾರಣೆ ಕಾನೂನು ಜಾರಿ ಮಾಡಿದ ಏಕೈಕ ಪಕ್ಷ ಸಿಪಿಎಂ ಸತತ 33 ವರ್ಷ ಸರ್ಕಾರ ನಡೆಸಿ ವಿಶ್ವ ಮಟ್ಟದಲ್ಲೇ ದಾಖಲೆ ಸೃಷ್ಟಿಸಿತ್ತು. ಆದರೆ ಬಹುರಾಷ್ಟ್ರೀಯ ಕಂಪನಿಗಳ ಹಿತ ಕಾಪಾಡಲು ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಂಚು ಹೂಡಿ ಪಕ್ಷವನ್ನು ಮುಗಿಸಲು ಹೊರಟಿದೆ. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಪಂಚಾಯತಿ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ನೀಡದೇ ಕಾರ್ಯಕರ್ತರನ್ನು ಬೆದರಿಸಿ ಬಗ್ಗದವರನ್ನು ಕೊಲೆ ಮಾಡಿಸಲಾಗಿದೆ. ಆದ್ದರಿಂದ ಬಂಡವಾಳ ಶಾಹಿ ಏಜೆಂಟರಂತೆ ವರ್ತಿಸಿ ಅರಾಜಕತೆ ಉಂಟು ಮಾಡುತ್ತಿರುವ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ದ ಕೇಂದ್ರ ಸರ್ಕಾರ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪಕ್ಷ ಸರ್ಕಾರಕ್ಕೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದೆ.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಹೆಚ್.ಪಿ. ಲಕ್ಷ್ಮೀನಾರಾಯಣ, ಶಿವಪ್ಪ, ಈಶ್ವರಪ್ಪ, ಅಶ್ವತ್ಥರೆಡ್ಡಿ, ಗ್ರಾ.ಪಂ. ಸದಸ್ಯ ಮುನಿರೆಡ್ಡಿ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement