ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪಪ್ರಚಾರಕ್ಕೆ ಕಿವಿಗೊಡಲ್ಲ, ಸಮಾಜ ಸೇವೆಯೂ ಬಿಡಲ್ಲ

Rashmi Kasaragodu
Updated On : 9 Aug 2013, 12:47 pm

ಕ.ಪ್ರ.ವಾರ್ತೆ ಟಿ ಬಾಗೇಪಲ್ಲಿ ಟಿ ಆ.8
ಅಧಿಕಾರ ಇರಲಿ ಇಲ್ಲದಿರಲಿ ನಾನು ಕ್ಷೇತ್ರದಲ್ಲಿ ನಿರಂತರವಾಗಿ ಸಮಾಜ ಸೇವೆ ಮಾಡುತ್ತೇನೆ. ಇದರಲ್ಲಿ ಯಾವುದೇ ರೀತಿಯ ಸಂಶಯ ಬೇಡ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುಸ್ಲಿಂ ಬಾಂಧವರಿಗೆ ಉಚಿತ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದ ಅವರು, ನಾನು ನನ್ನ ಹುಟ್ಟಿರುವ ಕ್ಷೇತ್ರದಲ್ಲಿರುವ ಬಡವರಿಗೆ ಉಚಿತವಾಗಿ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಶಾಸಕರಾದ ಮೇಲೆ ಸಮಾಜ ಸೇವೆ ಮರೆತಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು.
3 ವರ್ಷಗಳಿಂದ ಸತತವಾಗಿ ರಂಜಾನ್ ಹಬ್ಬದ ಪ್ರಯಕ್ತ ಬಡ ಮುಸ್ಲಿಂ ಬಾಂಧವರಿಗೆ ಉಚಿತವಾಗಿ ಸಕ್ಕರೆ, ಅಕ್ಕಿ, ಗೋಧಿಹಿಟ್ಟು, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಎಣ್ಣೆ, ಶ್ಯಾವಿಗೆ ಮುಂತಾದ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದೇನೆ.  ಗಣೇಶ್ ಚೌತಿಯಂದು ಗಣೇಶನ ವಿಗ್ರಹಗಳನೂ ವಿತರಿಸುತ್ತಿದ್ದೇನೆ. ಆದರೆ, ಅಪಪ್ರಚಾರಕ್ಕೆ ತಲೆ ಬಾಗಿಸುವುದಿಲ್ಲ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ ಮಾತನಾಡಿ, ತಾಲೂಕಿನಾದ್ಯಂತ 10 ಸಾವಿರ ಮುಸ್ಲಿಂ ಕುಟುಂಬಗಳಿವೆ. ಪಕ್ಷಾತೀತವಾಗಿ ಎಲ್ಲಾ ಕುಟುಂಬಗಳಿಗೂ ಆಹಾರ ಪದಾರ್ಥಗಳ ಚೀಲಗಳನ್ನು ವಿತರಣೆ ಮಾಡಲಾಗಿದೆ ಎಂದರು,
ಈ ಸಂದರ್ಭ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ್ ಮುಖಂಡರಾದ ಸಿ.ಅಮರನಾಥರೆಡ್ಡಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪುರಸಭೆಯ ಸದಸ್ಯ ಅ.ನ. ಮೂರ್ತಿ, ತಾ.ಪಂ. ಸದಸ್ಯ ಬೂರಗಮಡಗು ಲಕ್ಷ್ಮೀನರಸಿಂಹಪ್ಪ, ವಕೀಲರಾದ ಎ.ಜಿ.ಸುಧಾಕರ್, ಕದಿರನ್ನಗಾರಿಪಲ್ಲಿ ಅಶೋಕ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement