ಕೋಲಾರ ಬರಪೀಡಿತ: ನಾಮಕರಣ ಸೂಕ್ತ-ಸಚಿವ
ಕೋಲಾರ: ಇನ್ನು ಮುಂದೆ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ನಾಮಕರಣ ಮಾಡುವುದು ಸೂಕ್ತವೆಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು. ಕೋಲಾರದಲ್ಲಿ ಗುರುವಾರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯನ್ನು ಬರಪೀಡಿತ ಕೋಲಾರ ಎಂದು ಮರು ನಾಮಕರಣ ಮಾಡಬೇಕಾದ ಅವಶ್ಯಕತೆಯಿದೆ ಎಂದರು. ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ಸರ್ಕಾರ ಇಲ್ಲವೇ ಮಾಧ್ಯಮದವರು ಕೋಲಾರ ಎಂಬ ಪದ ಬಳಸಬಾರದು, ಬರಪೀಡಿತ ಕೋಲಾರ ಎಂದು ಬಳಸಬೇಕು, ಈ ಬಗ್ಗೆ ಅಧಿಕೃತ ನಾಮಕರಣ ಮಾಡಬೇಕು ಎಂದರು.