ಜೆಡಿಎಸ್ ಮುಖಂಡರು ವರ್ತೂರ್ ಬಣಕ್ಕೆ ಸೇರ್ಪಡೆ
ಕೋಲಾರ: ತಾಲೂಕಿನ ವಕ್ಕಲೇರಿ ಗ್ರಾಮದ ಕೆಲ ಮುಖಂಡರು ಜೆಡಿಎಸ್ ತೊರೆದು ಶಾಸಕ ವರ್ತೂರು ಪ್ರಕಾಶ್ ಬಣಕ್ಕೆ ಸೇರ್ಪಡೆಗೊಂಡರು.
ಸ್ಥಳೀಯ ಮುಖಂಡರಾದ ಮಂಜುನಾಥ್, ರಮೇಶ್, ಸತೀಶ್, ಆನಂದಕುಮಾರ್, ನೀಲಕಂಠ ಮತ್ತಿತರರು ಜೆಡಿಎಸ್ ತೊರೆದು ವರ್ತೂರು ಬಣಕ್ಕೆ ಸೇರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವರ್ತೂರ್ ಪ್ರಕಾಶ್, ವಿಧಾನಸಭಾ ಚುನಾವಣೆಯ ನಂತರವೂ ಜೆಡಿಎಸ್ ಮುಖಂಡರು ವಿಶ್ವಾಸವಿಟ್ಟು ತಮ್ಮ ಕೈಬಲಪಡಿಸುತ್ತಿರುವುದು ಸಂತಸ ಉಂಟು ಮಾಡಿದೆ. ಇದೇ ರೀತಿ ಎಲ್ಲರು ಸಹಕಾರ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ಬೆಗ್ಲಿ ಪ್ರಕಾಶ್, ರಘುರಾಂ, ಗ್ರಾಪಂ ಅಧ್ಯಕ್ಷ ರಾಜಪ್ಪ, ಸದಸ್ಯರಾದ ರಾಘವೇಂದ್ರ, ಹರ್ಷವರ್ಧನ್, ರತ್ನಮ್ಮ, ಚಿನ್ನಮ್ಮ, ಶ್ರೀನಿವಾಸ್, ಮಾಲಾ, ಅಪ್ಪಿ, ಕಾಡಹಳ್ಳಿ ಶೇಖರ್, ತಮ್ಮಣ್ಣ, ರಾಮಚಂದ್ರ ಮತ್ತಿತರರು ಇದ್ದರು.