ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೈಕ್ರೋ ಕ್ರೆಡಿಟ್ ಯೋಜನೆ ಮಹಿಳೆಗೆ ಉಪಯೋಗಿ

Rashmi Kasaragodu
Updated On : 9 Aug 2013, 12:48 pm

ನೂಟವೆ ಗ್ರಾಮದಲ್ಲಿ ವಾಲ್ಮೀಕಿ ಸಂಘದ ಸದಸ್ಯೆಯರಿಗೆ ಚೆಕ್ ವಿತರಿಸಿ ಜಿಪಂ ಸದಸ್ಯೆ ರತ್ನಮ್ಮ


ಟೇಕಲ್: ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ವತಿಯಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳಾ ಫಲಾನುಭವಿಗಳಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಬಹಳ ಅನುಕೂಲವಿದೆ ಎಂದು ಟೇಕಲ್ ಜಿಪಂ ಕ್ಷೇತ್ರದ ಸದಸ್ಯೆ ರತ್ನಮ್ಮ ನಂಜೇಗೌಡ ಅಭಿಪ್ರಾಯಪಟ್ಟರು.
ಅವರು ನೂಟವೆ ಗ್ರಾಮದ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ 20 ಮಹಿಳಾ ಸದಸ್ಯರಿಗೆ ತಲಾ 10 ಸಾವಿರದಂತೆ 2 ಲಕ್ಷ ರು. ಚೆಕ್ ವಿತರಿಸುತ್ತಾ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಈ ಸಾಲ ಯೋಜನೆಯನ್ನು ಬಳಸಿಕೊಂಡು ಹಲವಾರು ಕಸುಬುಗಳನ್ನು ಬಳಸಿ ಅಭಿವೃದ್ಧಿ ಪಥದತ್ತ ಸಾಗಬಹುದು. ಮಾಲೂರು ತಾಲೂಕಿನ ಮಹಿಳಾ ಸ್ತ್ರೀಶಕ್ತಿ ಸಂಘಗಳು ನಿಗಮದ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ ಗ್ರಾಮೀಣ ಪ್ರದೇಶದ ಬಹುತೇಕ ಬಡ ನಿರುದ್ಯೋಗ ಮಹಿಳೆಯರ ಬಗ್ಗೆ ಇಂತಹ ಸಾಲ ಯೋಜನೆ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಮಮತಾ ಅಣ್ಣಯ್ಯ, ನಾಯಕ ಸಂಘದ ಮುಖಂಡ ಮುನಿಸ್ವಾಮಿ, ಆಂಜಿನಪ್ಪ, ಗ್ರಾ.ಪಂ. ಅಧ್ಯಕ್ಷರುಗಳಾದ ಸಂಪತ್, ಕಿಟ್ಟಿ, ಮುಖಂಡರುಗಳಾದ ಕಾರಮಂಗಲದ ಕರಿಯಪ್ಪ, ವೆಂಕಟರಾಮಪ್ಪ, ಸಾದಪ್ಪ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement