ಕೊಳವೆಬಾವಿ ಕೊರೆಯುವ ಕಾರ್ಯಕ್ಕೆ ಚಾಲನೆ
ಮಾಲೂರು: ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪಟ್ಟಣದ ವಾ.ನಂ.17, 18ರಲ್ಲಿ ಪುರಸಭೆ ಮುಖ್ಯಾಧಿಕಾರಿ ರೇಣುಕಾ ನೀರಿನ ತೀವ್ರತೆ ಕಡಿಮೆಗೊಳಿಸಲು ಕೊಳವೆಬಾವಿ ಕೊರೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಬರಗಾಲ ನಿಧಿಯಿಂದ ಪಟ್ಟಣದಲ್ಲಿ 6 ಕಡೆ ಕೊಳೆವೆಬಾವಿಗಳನ್ನು ಹಾಗೂ ಹಾರೋಹಳ್ಳಿ ಕೆರೆ ಸೇರಿದಂತೆ 3 ಕಡೆ ಇರುವ ಕೊಳೆವೆಬಾವಿಯನ್ನು ರೀಬೋರಿಂಗ್ ಮಾಡಲು 30 ಲಕ್ಷ ವ್ಯಯ ಮಾಡಲಾಗುತ್ತಿದೆ. ಪ್ರತಿ ಕೊಳವೆಬಾವಿಗೆ 4.5 ಲಕ್ಷ ಪ್ಯಾಕೇಜ್‌ನಲ್ಲಿ ಕೊರೆಸಲಾಗುತ್ತಿದೆ. ಇದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ತೀರುವ ಭರವಸೆ ಇದೆ ಎಂದರು. ವಾರ್ಡ್ ಸದಸ್ಯ ಮಂಜುನಾಥ್, ಮುರಳೀಧರ್, ರಮೇಶ್, ಮಾಜಿ ಸದಸ್ಯ ರಾಮಚಂದ್ರ, ಗುತ್ತಿಗೆದಾರ ಶ್ರೀನಿವಾಸ್, ಶ್ರೀನಿವಾಸ್, ಲಕ್ಷಣ್, ಕೃಷ್ಣಪ್ಪ, ನೋಡಲ್ ಅಭಿಯಂತರ ನಾಗರಾಜ್, ವೆಂಕಟೇಶ್ ಇದ್ದರು.