ಮಾರಿಕುಪ್ಪಂ-ಬೆಂಗಳೂರು ರೈಲಿಗೆ ಇಂದು ಹಸಿರು ನಿಶಾನೆ
ಬೆಂಗಳೂರು: ಮಾರಿಕುಪ್ಪಂ-ಬೆಂಗಳೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶನಿವಾರ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.
ವಾರದ ಆರು ದಿನಗಳ ಕಾಲ ಬೆಂಗಳೂರು-ಮಾರಿಕುಪ್ಪಂ ನಡುವೆ ಸಂಚರಿಸುವ ರೈಲಿನಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಬರುವ ಸಾವಿರಾರು, ನೌಕರರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. 2013ರ ಬಜೆಟ್‌ನಲ್ಲಿ ಈ ರೈಲು ಆರಂಭಿಸುವುದಾಗಿ ಘೋಷಿಸಲಾಗಿತ್ತು.
ಬೆಳಿಗ್ಗೆ 4.45ಕ್ಕೆ ಮಾರಿಕುಪ್ಪಂನಿಂದ ಹೊರಡುವ ರೈಲು 7.45ಕ್ಕೆ ಬೆಂಗಳೂರು ನಗರ ರೈಲು ನಿಲ್ದಾಣ ತಲುಪಲಿದೆ. ಚಾಂಪಿಯನ್, ಊರಗಂ, ಕೋರೋಮಂಡಲ್, ಬಿಇಎಂಎಲ್ ನಗರ, ಬಂಗಾರಪೇಟೆ, ಮಾಲೂರು, ವೈಟ್‌ಫೀಲ್ಡ್, ಕೆ.ಆರ್.ಪುರ, ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ವಾಪಸ್ ಮಾರ್ಗದಲ್ಲಿ ರಾತ್ರಿ 8.15ಕ್ಕೆ ನಗರ ರೈಲು ನಿಲ್ದಾಣದಿಂದ ಹೊರಟು 10.30ಕ್ಕೆ ಮಾರಿಕುಪ್ಪಂ ತಲುಪಲಿದೆ.
ಪ್ಯಾಸೆಂಜರ್ ರೈಲಿಗೆ 6 ಸಾಮಾನ್ಯ ಕೋಚ್‌ಗಳು 2 ಮೋಟರ್ ಕೋಚ್‌ಗಳೊಂದಿಗೆ ಒಟ್ಟು 8 ಕೋಚ್‌ಗಳನ್ನು ಹೊಂದಿರಲಿದೆ. ಅಲ್ಲದೇ ಮೇನ್‌ಲೈನ್ ಎಲೆಕ್ಟ್ರಾನಿಕ್ ಯೂನಿಟ್ (ಮೆಮೂ) ಎಂಜಿನ್‌ನೊಂದಿಗೆ ಸಂಚರಿಸಲಿದೆ.