ಮಾಲೂರು: ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ಮಾಲೂರು: ಮಾಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಶುಕ್ರವಾರ ನೌಕರರ ಸಂಘದ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ನಿರ್ದೇಶಕರುಗಳ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಸಂಘದ ಅಧ್ಯಕ್ಷ ಗುಂಡಪ್ಪ, ಗೌರವಾಧ್ಯಕ್ಷರಾಗಿ ಟಿ.ಕೆ. ಅಶ್ವತ್ಥ್‌ನಾರಾಯಣ ಗೌಡ, ರಾಜ್ಯ ಪರಿಷತ್ ಸದಸ್ಯರಾಗಿ ಜಯರಾಂ, ಖಂಜಾಚಿಯಾಗಿ ಸೋಮಶೇಖರ್, ಉಪಾಧ್ಯಕ್ಷರಾಗಿ ಜಯಶೀಲ, ಎಸ್.ಎನ್. ಮುನಿರಾಜು, ಶಿವಣ್ಣ, ಗಂಗರಾಮ್, ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ, ಪ್ರೇಮಾ, ಪಿಳ್ಳಪ್ಪ, ಜುಕಿನ್ ಆಂಥೋಣಿ, ಜಂಟಿ ಕಾರ್ಯದರ್ಶಿಯಾಗಿ ಜಗದೀಶ್, ರಮೇಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಮುನಿವೆಂಕಟಪ್ಪ, ನಾಮ ನಿರ್ದೇಶಕರಾಗಿ ರವಿಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು. ಆಯ್ಕೆಯಾದವರೆಲ್ಲ ಹೆಚ್ಚು ಸಂಘಟಿಕರಾಗಿ ಸಂಘವನ್ನು ಶಕ್ತಿಯುತವಾಗಿ ಬೆಳೆಸುವುದಾಗಿ ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣ ಇದ್ದರು.