ಅಪಘಾತ: ಇಬ್ಬರು ಯುವಕರ ಸಾವು
ಶ್ರೀನಿವಾಸಪುರ: ದ್ವಿಚಕ್ರ ವಾಹನಕ್ಕೆ ಆಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಉಪ್ಪರಪಲ್ಲಿ ಗೇಟ್ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ಪಟ್ಟಣದ ಎಸ್.ಎಂ. ಕೃಷ್ಣೇಗೌಡ (20) ಮತ್ತು ವಿಜಯಕುಮಾರ್ (18) ಎಂದು ಗುರುತಿಸಲಾಗಿದೆ.
ತಾಲೂಕಿನ ಲಕ್ಷ್ಮೀಪುರ ಪಂಚಾಯಿ ಉಪ್ಪರಪಲ್ಲಿಯಲ್ಲಿ ಮುಸ್ಲಿಂ ಸ್ನೇಹಿತರು ರಂಜಾನ್ ಹಬ್ದದ ಊಟ ಸವಿಯುವುದಕ್ಕಾಗಿ ಆಹ್ವಾನಿಸಿದ್ದರು. ಉಪ್ಪರಪಲ್ಲಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುದ್ದಾಗ ಅಪಘಾತವಾಗಿದೆ. ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.