ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

Rashmi Kasaragodu
Updated On : 10 Aug 2013, 11:58 am

ಚಿಂತಾಮಣಿ: ಕ್ಷುಲ್ಲಕ ಕಾರಣದಿಂದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾದರಕಲ್ಲು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮಾದರಕಲ್ಲು ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ರಾಮಕೃಷ್ಣಪ್ಪ ತನ್ನ 20 ಕುಂಟೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಇದರಲ್ಲೆ ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದ. ಆದರೆ, ಕಳೆದ 2 ದಿನಗಳ ಹಿಂದೆ ಕೊಳವೆ ಬಾವಿಯ ಮೋಟಾರ್ ರಿಪೇರಿಯಾಗಿರುವುದರಿಂದ ಮೋಟಾರನ್ನು ಮೇಲಕ್ಕೆ ತೆಗೆದು ಕೊಳವೆ ಬಾವಿಯನ್ನು ಮುಚ್ಚದೆ ಹಾಗೆ ಇರುವುದರಿಂದ ದುಷ್ಕರ್ಮಿಗಳು ಕೊಳವೆ ಬಾವಿಗೆ ಕಲ್ಲುಗಳು ಹಾಕಿರುವುದಾಗಿ ನೊಂದ ರಾಮಕೃಷ್ಣ ಗ್ರಾಮದ ಹಿರಿಯರಿಗೂ ಹಾಗೂ ಪೊಲೀಸರಿಗೂ ದೂರು ನೀಡಿದ್ದ ಎನ್ನಲಾಗಿದೆ.
ಈ ವಿಷಯವಾಗಿ ಗ್ರಾಮದ ಮೇಲ್ವರ್ಗಕ್ಕೆ ಸೇರಿದ ವೆಂಕಟೇಶಪ್ಪ, ಚಲಪತಿ, ದ್ಯಾವಪ್ಪ ಪಕ್ಕದ ತೋಟದ ಕೊಳವೆ ಬಾವಿಗೆ ದಲಿತ ರಾಮಕೃಷ್ಣ ಕೊಳವೆ ಬಾವಿ ರಿಪೇರಿ ಮಾಡಿಸಿದರೆ ನೀರು ನಮಗೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವ ದುರುದ್ದೇಶದಿಂದ ಊರಿನ ರಸ್ತೆಬದಿಯಲ್ಲೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ ಪರಿಣಾಮ, ರಾಮಕಷ್ಣಪ್ಪ ತೀವ್ರ ಗಾಯಗಳಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುನ್ನಡೆಸಿದ್ದಾರೆ.


ಇಂದು ಪ್ರತಿಭಾ ಪುರಸ್ಕಾರ
ಕೆಜಿಎಫ್:  ಕೆಜಿಎಫ್ನ ಕನ್ನಡ ಸಂಘದ ವತಿಯಿಂದ ಭಾನುವಾರ ಸಂಜೆ 5.30ಕ್ಕೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ. ನರಸಿಂಹೇಗೌಡ ನಾರಣಾಪುರ ಅಧ್ಯಕ್ಷತೆ ವಹಿಸುವರು. ಕೆಜಿಎಫ್ ಶಾಸಕಿ ವೈ.ರಾಮಕ್ಕ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಶಂಕರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೃಷ್ಣಮೂರ್ತಿ ಭಾಗವಹಿಸುವರು. ಕೆ.ಆರ್.ಪುರಂ. ಬೆಂಗಳೂರಿನ ಹ.ರ.ನಾಗರಾಜಾಚಾರ್ಯ ಅವರಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಸಂಘ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement