ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲಿತರ ಮೀಸಲಾತಿ ಕಬಳಿಕೆ; ದಸಂಸ ಆರೋಪ

Rashmi Kasaragodu
Updated On : 11 Aug 2013, 12:21 pm

ಕ.ಪ್ರ.ವಾರ್ತೆ     ಕೋಲಾರ     ಆ.10
ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಅನೇಕ ಮಹಾನೀಯರು ನಡೆಸಿದ ಹೋರಾಟದ ಫಲದಿಂದ ಸಿಕ್ಕದ ಮೀಸಲಾತಿಯನ್ನು ಇಂದು ಮೇಲ್ವರ್ಗದವರು ಕಬಳಿಕೆ ಮಾಡಿಕೊಳ್ಳುತ್ತಿದದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್. ಮೋಹನ್ ರಾಜ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೀಸಲಾತಿ ಜನಕ ಛತ್ರಪತಿ ಶಾಹು ಮಹಾರಾಜ್‌ರವರ 139ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೀಸಲಾತಿ ಒಂದು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರು, ಹಿಂದುಳಿದ ವರ್ಗ ಹಾಗೂ ಬಹುಸಂಖ್ಯಾತರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಮೀಸಲಾತಿ ಅಗತ್ಯವಾಗಿದೆ ಎಂಬುದನ್ನು ಅರಿತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಛತ್ರಪತಿ ಶಾಹು ಮಹಾರಾಜ್ ಅವರು ಮೀಸಲಾತಿಗಾಗಿ ಹೋರಾಟಗಳನ್ನು ರೂಪಿಸಿ ಜಾರಿಗೆ ತಂದರು. ಆದರೆ ಶೋಷಿತರಿಗೆ ಮಾತ್ರ ಮೀಸಲಾಗಬೇಕಾಗಿದ ಈ ವ್ಯವಸ್ಥೆಯನ್ನು ಮೇಲ್ವರ್ಗದವರು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾಡಿ ಸವಲತ್ತುಗಳನ್ನು ಕಬಳಿಸುತ್ತಿರುವುದು ಶೋಷಿತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 1800 ಮಂದಿ ನಕಲಿ ಜಾತಿ ಪತ್ರಗಳನ್ನು ಸೃಷ್ಟಿಸಿ ಸರ್ಕಾರಿ ಕೆಲಸಗಳಲ್ಲಿ ಸೇರಿದ್ದಾರೆ ಎಂದ ದೂರಿದ ಅವರು,ಮುಂದಿನ ದಿನಗಳಲ್ಲಿ ನಿಜವಾದ ಶೋಷಿತರು ಸೌಲಭ್ಯಗಳನ್ನು ಪಡೆಯುವುದು ಕನಸಿನ ಮಾತಾಗಲಿದೆ ಎಂದು ತಿಳಿಸಿದರು.
ಶಾಹು ಮಹಾರಾಜ್  ಶೋಷಿತರ ಪರ ಧ್ವನಿಯೆತ್ತಿ, ಅಸಮಾನತೆಯನ್ನು ತೊಡೆದು ಹಾಕಲು ಹೋರಾಟ ನಡೆಸಿದ ಮಹಾಪುರುಷ ಎಂದ ಅವರು,ಇಂತಹ ಅನೇಕ ಮಹಾನೀಯರಿಂದ ದಕ್ಕಿದ ಮೀಸಲಾತಿಯನ್ನು ಸಹ ಇಂದು ಕಬಳಿಕೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆಂದು ಹೇಳಿದರು.
ಖಾಸಗೀಕರಣ, ಜಾಗತೀಕರಣ ಮತ್ತು ಹೊಸ ಆರ್ಥಿಕ ನೀತಿಗಳಿಂದ ಮೀಸಲಾತಿಯನ್ನು ಪಡೆಯುವುದ ಕಷ್ಟದ ಕೆಲಸವಾಗಿದ್ದು, ಕೇಂದ್ರ ಯುಪಿಎ ಸರಕಾರ ಖಾಸಗೀಕರಣದಲ್ಲೂ ಸಹ ಮೀಸಲಾತಿಯನ್ನು ನೀಡುವುದಾಗಿ ಹೇಳಿತು.ಆದರೆ ಅನುಷ್ಠಾನಗೊಳಿಸುವುದರಲ್ಲಿ ವಿಫಲವಾಗಿದೆ ಎಂದು ದೂರಿದರು.
ದೇಶದ ದಲಿತ ಸಮುದಾಯಗಳು ಒಂದಾಗಿ ಜಾಗಣತಿ ಅಂದೋಲವನ್ನು ನಡೆಸದಿದ್ದರೆ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದ ಅವರು, ಈ ನಿಟ್ಟನಲ್ಲಿ ಎಲ್ಲಾ ಸಂಘಟನೆಗಳು ವೈಚಾರಿಕತೆಯ ಅರಿತು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಡಾ. ಡಾಮನಿಕ್ ವಹಿಸಿದ್ದರು. ಹಿರಿಯ ದಲಿತ ಮುಖಂಡರಾದ ನಮ್ಮನೆ ನಾರಾಯಣಸ್ವಾಮಿ, ಬೆಟ್ಟಹೊಸಪುರ ಮುನಿಯಪ್ಪ, ಜಿ.ವಿ. ಕೃಷ್ಣಪ್ಪ, ಜಿ. ಮುನಿವೆಂಕಟಪ್ಪ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement